ಕುಶಾಲನಗರ, ಆ 24:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದಲ್ಲಿರುವ ಹುಣಸೆಪಾರೆ ಹಾಡಿ ನಿವಾಸಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಕಳೆದ 3 ವರ್ಷಗಳಿಂದ ಹಾಡಿ ಜನರಿಗೆ ಅವರ ಜಾಗದಲ್ಲಿ ಮನೆಗಳ ನಿರ್ಮಾಣಕ್ಕೆ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಯಾದರೂ ಸಹ ಮನೆಗಳ ನಿರ್ಮಾಣವಾಗಿಲ್ಲ. ಮನೆಗಳಿಗೆ ಕಳೆದ ಒಂದು ತಿಂಗಳಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಡಿತಗೊಂಡಿದೆ, ಅಲ್ಲದೆ ಹಾಡಿಗೆ ತೆರಳುವ ರಸ್ತೆ ತೀರಾ ಹಾಳಾಗಿದ್ದು ಈ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಕೋರಿ ಹಾಡಿ ನಿವಾಸಿಗಳು ಹಾಗೂ ಹಾಡಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯ ಅನಂತ್ ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದರು.
ಕಳೆದ ಮೂರು ವರ್ಷಗಳಿಂದಲೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಕ್ಕೆ ತಂದರೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಹುಣಸೆ ಪಾರೆ ಕುರುಬ ಜನಾಂಗದ ಹಾಡಿಗೆ ತೆರಳುವ ಒಂದು ಕಿಲೋಮೀಟರ್ ರಸ್ತೆಯು ತೀರಾ ಹಾಳಾಗಿದ್ದು, ಇದರ ಸಮೀಪದಲ್ಲಿ ಜೇನು ಕಲ್ಲು ಮೀಸಲು ಅರಣ್ಯ ಪ್ರದೇಶವಿದ್ದು ಕಾಡಾನೆಗಳ ಹಾವಳಿ ಮಿತಿಮೀರಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ಹಾಡಿಯ ಜಿ.ಕೆ.ರಾಜು ತಿಮ್ಮಪ್ಪ, ಪ್ರವೀಣ್, ಸಚಿನ್, ಉಮೇಶ್ ಇದ್ದರು.
Back to top button
error: Content is protected !!