ಕಾರ್ಯಕ್ರಮ

ಲಿಯಾಫಿ: ಕುಶಾಲನಗರ ಉಪಶಾಖೆಯ ಮಹಾಸಭೆ

ಕುಶಾಲನಗರ, ಆ 23: ಅಖಿಲ‌ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕುಶಾಲನಗರ ಉಪ ಶಾಖೆಯ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಮೈಸೂರು ವಿಭಾಗೀಯ ಒಕ್ಕೂಟದ ಅಧ್ಯಕ್ಷ ವಿ.ಜಿ.ಅಶೋಕ್ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಬೇಡಿಕೆಗಳ ಈಡೇರಿಕೆಗೆ ಕೆಲವರು ಕೈಗೊಂಡ ಹೋರಾಟದ ಫಲವನ್ನು ಹಲವರು ಪಡೆದುಕೊಳ್ಳುತ್ತಿರುವುದು ಹೆಮ್ಮೆಯ‌ ವಿಚಾರ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು. ಸಂಘಟನೆಯ ಉಪಯೋಗಳನ್ನು ಅರಿತು, ಇತರರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ಸೋಮವಾರಪೇಟೆ ಶಾಖೆಯ ಪ್ರಬಂಧಕ ಸತೀಶ್ ಕುಮಾರ್ ಮಾತನಾಡಿ, ಪ್ರತಿನಿಧಿಗಳು ಹಣ ಮಾಡುವ ಹಾಗೂ ರಾಜಕೀಯ ಉದ್ದೇಶದಿಂದ ಸಂಘಟನೆಗೆ ಸೇರಬಾರದು ಎಂದರು.
ಪ್ರಾಸ್ತಾವಿಕವಾಗಿ ಸಂಘಟನೆ ಮಹತ್ವದ ಬಗ್ಗೆ ಮಾತನಾಡಿದ ವಿಭಾಗೀಯ ಕಾರ್ಯದರ್ಶಿ ಎಂ.ರಾಜು,
ಜನರ ಹಣವನ್ನು ಜನರ ಅಭಿವೃದ್ಧಿ ವಿನಿಯೋಗಿಸುವ ಸಂಸ್ಥೆ ಎಲ್ಐಸಿ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟನೆ ಸ್ಥಾಪನೆಯಾಯಿತು. ಲಿಯಾಫಿ ಸಂಘಟನೆಯ ಹೋರಾಟದ ಫಲವಾಗಿ ಇಂದು ಪ್ರತಿನಿಧಿಗಳಿಗೆ ಗೌರವಯುತ ಸ್ಥಾನಮಾನ ಲಭಿಸಿದೆ.‌ಇದನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದವರು ಸಂಘಟನೆಗೆ ಚಿರ ಋಣಿಯಾಗಿರಬೇಕು ಎಂದರು.
ಕುಶಾಲನಗರ ಶಾಖೆಯ ಅಧ್ಯಕ್ಷ ಕೆ.ಸಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿನಿಧಿ ದಿನೇಶ್ ಕುಮಾರ್, ವಾರ್ಷಿಕ ವರದಿ‌ ಮಂಡನೆ, ಹೇಮಾವತಿ ಆಯವ್ಯಯ ಮಂಡನೆ‌ ಮಾಡಿದರು.
ಇದೇ ಸಂದರ್ಭ ಗಣ್ಯರು, ಹಿರಿಯ ಪ್ರತಿನಿಧಿಗಳು, ವಿಭಾಗೀಯ ಮಟ್ಟದ ಪದಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಕುಶಾಲನಗರ ಶಾಖೆಯ ನಿರ್ದೇಧಕರುಗಳಿಗೆ ಸನ್ಮಾನ ನೆರವೇರಿಸಲಾಯಿತು. ಲಿಯಾಫಿಯ
ಕುಶಾಲನಗರ ಕಮಿಟಿ ಬದಲಾವಣೆ ಬಗ್ಗೆ ಚರ್ಚೆ, ಪ್ರತಿನಿಧಿಗಳಿಂದ ಅನಿಸಿಕೆ ಅಭಿಪ್ರಾಯ ವ್ಯಕ್ತಗೊಂಡಿತು.
ಈ ಸಂದರ್ಭ ವಿವಿಧ ಘಟಕಗಳ ಪ್ರಮುಖರಾದ ರಿಷಿ ಚರಣ್, ‌ಸವಿತಾ, ಟಿ.ಬಿ.ಜಗದೀಶ್, ಶಿವಣ್ಣ, ತಿಲಕ್ ಬಾಬು, ವಸಂತ ಕುಮಾರ್, ಚಂಗಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!