ಕುಶಾಲನಗರ ಆ 19: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನೂತನ ಅಧ್ಯಕ್ಷೆಯಾಗಿ ಕಾಂಚನಾ , ಉಪಾಧ್ಯಕ್ಷೆಯಾಗಿ ,ಆರ್ ರಶ್ಮಿ ನವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರ ಚುನಾವಣೆಯಲ್ಲಿ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಜನಾದೇವಿ ತಿಳಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸುಮಾ, ಲೀಲಾವತಿ, ಕಾಂಚನಾ, ಪುಟ್ಟಮ್ಮ, ಪುಷ್ಪಾರ್ವತಿ, ಪದ್ಮ, ರತ್ನ, ರಶ್ಮಿ, ಲತಾ, ಸೇರಿದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪುನೀತ್, ಸಂಘದ ಕಾರ್ಯದರ್ಶಿ ಜಾನಕಿ ಹಾಜರಿದ್ದರು.
Back to top button
error: Content is protected !!