ಕುಶಾಲನಗರ, ಆ 11: ನನ್ನ ನೆಲ ನನ್ನ ದೇಶ ಅಭಿಯಾನದ ಅಂಗವಾಗಿ
ವೀರಯೋಧರಿಗೆ ವಂದನೆ ಅರ್ಪಿಸುವ ಮತ್ತು ಈ ಮಣ್ಣಿಗೆ ನಮನ ಸಲ್ಲಿಸುವ ವಸುಧ ವಂದನ ಕಾರ್ಯಕ್ರಮ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಿತು.
ಅಭಿಯಾನದ ಅಂಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಎಂ.ಆರ್.ಮಾದಪ್ಪ, ಸದಸ್ಯರಾದ ಪ್ರವೀಣ್, ಪ್ರದೀಪ್, ನಿತ್ಯಾನಂದ, ನಂದಿನಿ, ಯಶೋಧ, ಉಮಾ, ಪಿ.ಡಿ.ಓ ಶ್ಯಾಂ, ಕಾರ್ಯದರ್ಶಿ ಕುಮಾರಸ್ವಾಮಿ ಹಾಜರಿದ್ದರು.
Back to top button
error: Content is protected !!