ಕುಶಾಲನಗರ, ಆ 01: ಕೊಡಗು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಭೆಯು ಜಿಲ್ಲಾ ಅಧ್ಯಕ್ಷ ಟಿ. ಕೆ. ಪಾಂಡುರಂಗ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಮಾತನಾಡಿ, ನೇಕಾರ ಒಕ್ಕೂಟದ ಬೆಳವಣಿಗೆಗೆ ಎಲ್ಲಾ ತಾಲ್ಲೂಕಿನ ನೇಕಾರ ಸಮುದಾಯದವರ ಸಹಕಾರ ಮುಖ್ಯ. ಅದೇ ರೀತಿಯಲ್ಲಿ ನೇಕಾರ ಒಕ್ಕೂಟದ ಸಮುದಾಯದವರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸದಸ್ಯರು ಮುಂದಾಗಬೇಕೆಂದು ಸಲಹೆ ನೀಡಿದರು. ಅಲ್ಲದೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಕ್ಕೂಟದ ಸಂಘಟನೆಗೆ ಜಿಲ್ಲಾ ಸಮಿತಿಯ ಕಾರ್ಯನ್ಮುಖರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ಉಪಾಧ್ಯಕ್ಷ ಬಲಬದ್ರ ಜಗದೀಶ್, ಕಾರ್ಯದರ್ಶಿ ಬಿ. ಎಸ್. ಲಿಂಗರಾಜ್, ಕಛೇರಿ ಕಾರ್ಯದರ್ಶಿ ದಯಾನಂದ ಶೆಟ್ಟಿಗಾರ್, ರಾಜ್ಯ ಸಮಿತಿಯ ಜಿಲ್ಲೆಯ ಸದಸ್ಯರಾದ ಡಿ. ಕೆ.ತಿಮ್ಮಪ್ಪ, ಜಿಲ್ಲಾ ಸಮಿತಿಯ ಸದಸ್ಯರಾದ ಮೋಹನ್, ಕುಶಾಲನಗರ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ.ರಾಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮ ಮಹೇಶ್, ಜಿಲ್ಲಾ ಕಾರ್ಯದರ್ಶಿ ಟಿ. ವಿ.ಪ್ರಕಾಶ್, ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಕುಶಾಲನಗರ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ವೇಣು, ಕುಶಾಲನಗರ ದೇವಾಂಗ ಸಂಘದ ಪ್ರಮುಖರಾದ ರೇಣುಕುಮಾರ್, ವಿಜಯ್, ಸೋಮಶೇಖರ್, ರಾಕಿ, ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಟಿ. ಕೆ. ಪಾಂಡುರಂಗ ಪುನರ್ ಅಯ್ಕೆ ಗೊಂಡರು.
ನೇಕಾರ ಸಮುದಾಯದ ಒಕ್ಕೂಟದ ಸದಸ್ಯೆ ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದ ಶೋಭಾ ಪ್ರಕಾಶ್ ನವರನ್ನು ರಾಜ್ಯ ನೇಕಾರರ ಒಕ್ಕೂಟ ಮತ್ತು ಜಿಲ್ಲಾ ನೇಕಾರ ಒಕ್ಕೂಟದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
Back to top button
error: Content is protected !!