ಕಾರ್ಯಕ್ರಮ

ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನ ಲೋಕಾರ್ಪಣೆ

ಕುಶಾಲನಗರ ಜು 22: ನಬಾರ್ಡ್ ಪ್ರಾಯೋಜಕ್ವದಲ್ಲಿ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ತೊರೆನೂರಿನ ಪ್ರಾಥಮಿಕ ಕೃಷಿ‌ ಪತ್ತಿನ‌ ಸಹಕಾರ ಸಂಘದ ನೂತನ‌ ಸಮುದಾಯ ಭವನವನ್ನು ಶಾಸಕ‌ ಮಂಥರ್ ಗೌಡ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಪ್ರಾಮಾಣಿಕ ‌ಪ್ರಯತ್ನ‌ ಮಾಡಬೇಕಿದೆ. ಹೆಚ್ಚು ಸದಸ್ಯತ್ವ ಹೊಂದುವ ಮೂಲಕ ಸಂಘದ ಬೆಳವಣಿಗೆಗೆ ಶ್ರಮಿಸಬೇಕಿದೆ. ಸಮಸ್ಯೆ ಹಾಗೂ ಆರೋಪಗಳಿಗೆ ಆಸ್ಪದ‌ ನೀಡದಂತೆ ಆಡಳಿತ ನಡೆಸುವುದು ಅವಶ್ಯಕವಾಗಿದೆ. ಮುಂಬರುವ ಆಡಳಿತ ಮಂಡಳಿ‌ ಕೂಡ ಸಂಘವನ್ನು‌ ಮತ್ತಷ್ಟು ಅಭಿವೃದ್ದಿಯತ್ತ‌ ಕೊಂಡೊಯ್ಯಲು ಪ್ರಯತ್ನಿಸಬೇಕಿದೆ ಎಂದರು.ಗೋದಾಮು ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ ಗಣಪತಿ ಮಾತನಾಡಿ, ಸಹಕಾರ ಸಂಘದ ಸದಸ್ಯರಿಗೆ ಅನುಕೂಲ ಒದಗಿಸುವ ಬದ್ದತೆ ಸಹಕಾರ ಸಂಘದ ಆಡಳಿತ ಮಂಡಳಿಗೆ ಬೇಕಿದೆ. ಸರಕಾರ ಹಾಗೂ ಸಹಕಾರ ಇಲಾಖೆ ಹೊರತುಪಡಿಸಿ ಸದಸ್ಯರಿಂದಲೇ ಸಂಘಗಳು ಅಭಿವೃದ್ಧಿ ಕಾಣುತ್ತಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೂಡ‌ನ ಬಾರ್ಡ್ಪ್ರಾ ಯೋಜಕತ್ವದಲ್ಲಿ ಹಲವು ಸಂಘಗಳಿಗೆ ಸಭಾಂಗಣ ನಿರ್ಮಾಣಕ್ಕೆ ಸಹಕಾರ ಒದಗಿಸಿದೆ ಎಂದರು.ಹಿಂದಿನ ಸರಕಾರ ಘೋಷಿಸಿದಂತೆ ರೈತರ ಸಾಲ‌ ಮನ್ನಾ ಮೊತ್ತ ಇದುವರೆಗೆ ಬಿಡುಗಡೆಗೊಂಡಿಲ್ಲ. ಇದರಿಂದ ಜಿಲ್ಲೆಯ ಸಹಕಾರ ಸಂಘಗಳಿಗೆ ತೀವ್ರ ನಷ್ಟ ಎದುರಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ಸರಕಾರದ ಗಮನ ಸೆಳೆಯಬೇಕಿದೆ ಎಂದು ಕೋರಿದರು.

ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್,
ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ಕೆ.ಚಿಣ್ಣಪ್ಪ, ಎಸ್.ಬಿ.ಭರತ್ ಕುಮಾರ್, ತೊರೆನೂರು ಗ್ರಾಪಂ ಅಧ್ಯಕ್ಷೆ ರೂಪಾ ಮಾತನಾಡಿದರು.ಸಂಘದ ನಿರ್ದೇಶಕ ಟಿ.ಕೆ.ಪಾಂಡುರಂಗ ಸಂಘದ ವಾರ್ಷಿಕ ವರದಿ ವಾಚಿಸಿದರು.ಇದೇ ಸಂದರ್ಭ ನೂತನ ಶಾಸಕರು, ಗುತ್ತಿಗೆದಾರರು,ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅತಿಥಿಗಳನ್ನು‌ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಅಧ್ಯಕ್ಷ ಎಚ್.ಟಿ.ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕಿ ಜಲಜ ಶೇಖರ್,ಸಹಕಾರ ಸಂಘದ ಸಹಾಯಕ ನಿಬಂಧಕ ಎಂ.ಇ.ಮೋಹನ್, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಧರ್ಮಪ್ಪ, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಮಹದೇವ್, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್, ತೊರೆನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ವೀಣಾ, ತೊರೆನೂರು ಸಹಕಾರ ಸಂಘದ ಉಪಾಧ್ಯಕ್ಷೆ ಲಲಿತಾ, ನಿರ್ದೇಶಕರಾದ ಟಿ.ಕೆ.ಕುಮಾರ್, ಕೆ.ಎಸ್.ಕೃಷ್ಣೇಗೌಡ, ಎಚ್.ಬಿ.ಚಂದ್ರಪ್ಪ, ಟಿ.ಪಿ.ಪ್ರಸನ್ನ, ಡಿ.ಆರ್.ಪ್ರೇಮ್ ಕುಮಾರ್, ಎಚ್.ಆರ್.ಭಾಗ್ಯ, ಟಿ.ಜಿ.ಲೋಕೇಶ್, ಟಿ.ಸಿ.ಶಿವಕುಮಾರ್, ಟಿ.ಜಿ.ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತು ಪ್ರಸಾದ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!