ಕುಶಾಲನಗರ, ಜು 22: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಅಣೆಕಟ್ಟೆಯ 4 ಕ್ರೆಸ್ಟ್ ಗೇಟ್ ಗಳ ಮೂಲಕ ಶನಿವಾರ ಸಂಜೆ ನದಿಗೆ ನೀರು ಹರಿಸಲಾಯಿತು.
ಮಳೆ ಹೆಚ್ಚಾದ ಕಾರಣ ಏಕಾಏಕಿ ಜಲಾಶಯಕ್ಕೆ 20,000 ಕ್ಯೂಸೆಕ್ ಪ್ರಮಾಣದ ನೀರು ಒಳಹರಿವು ಬಂದ ಹಿನ್ನಲೆಯಲ್ಲಿ ಹಾರಂಗಿ ನದಿಗೆ 2000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಯಿತು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಕ್ರೆಸ್ಟ್ ಗೇಟ್ ಗಳಿಗೆ ಪೂಜೆ ಸಲ್ಲಿಸಿ ನೀರು ಬಿಡುಗಡೆಗೆ ಚಾಲನೆ ನೀಡಿದರು.
ಈ ಸಂದರ್ಭ ಅಣೆಕಟ್ಟೆ ಸಹಾಯಕ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಇದ್ದರು.
Back to top button
error: Content is protected !!