ಕುಶಾಲನಗರ, ಜು 18: ಯಾವುದೇ ದೇಶವು ಅಭಿವೃದ್ಧಿ ಹೊಂದಲು ಅ ದೇಶದ ಭೌಗೋಳಿಕ ವ್ಯಾಪ್ತಿ ಹಾಗೂ ಅಸ್ತಿ , ಸಂಪನ್ಮೂಲಗಳಿಂತಲೂ ಪ್ರತಿಯೊಬ್ಬರಿಗೂ ಶಿಕ್ಷಣವೇ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೆಬ್ಬಾಲೆ ಗ್ರಾಮದಲ್ಲಿರುವ ಸೆಕ್ರೆಡ್ ಹಾರ್ಟ್ ಆಂಗ್ಲ ಭಾಷೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶೀಯ ಸಂಸ್ಕಾರದೊಂದಿಗೆ ಆಂಗ್ಲ ಭಾಷೆ ಸೇರಿದಂತೆ ಮಾತೃ ಭಾಷೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರು ಭಾರತವನ್ನು ಗೌರವಿಸುವಂತೆ ಮಾಡಿದರು ಎಂದು ಶಿಕ್ಷಣದ ಮೌಲ್ಯದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಇ.ಬಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಜಿ.ಎಲ್.ರಾಮಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎಚ್. ವಿ. ಶಿವಪ್ಪ, ಜ್ಞಾನ ಕಾವೇರಿ ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲೋಕೇಶ್ ಭರಣಿ, ಹೆಬ್ಬಾಲೆ ಕೆನರಾ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ಸೂರ್ಯ, ಕಸಾಪ ಹೋಬಳಿ ಪದಾಧಿಕಾರಿಗಳಾದ ಉದಯಕುಮಾರ್, ಶಾಂಭಶಿವಮೂರ್ತಿ, ಎಂ.ಎನ್. ಮೂರ್ತಿ, ಉಮೇಶ್, ಮುಖ್ಯ ಶಿಕ್ಷಕಿ ಲೇಖಜಾನ್, ಶಾಲಾ ವ್ಯವಸ್ಥಾಪಕ ಹೆಚ್.ಎಸ್. ಲೋಕೇಶ್ ಉಪಸ್ಥಿತರಿದ್ದರು.
ನಂತರ ಶಾಲಾ ವಿಧ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವನ ಮಹೋತ್ಸವನ್ನು ಆಚರಣೆ ಮಾಡಲಾಯಿತು.
Back to top button
error: Content is protected !!