ಕುಶಾಲನಗರ, ಜು 18:
ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಭುವಿನ್ ಕೆ ಎಸ್,ಐಶ್ವರ್ಯ,ಹಾಗೂ ಭೂಮಿಕ ಕೆ ಎಸ್ ಇವರ ಜೊತೆಗೆ ಇನ್ನೂಳಿದ ವಿದ್ಯಾರ್ಥಿಗಳನ್ನು ತೊರೆನೂರು ಶಾಲೆಯಿಂದ ಸ್ವಗ್ರಾಮ ಅಳುವಾರಕ್ಕೆ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳಿಗೆ ತೀವ್ರತರವಾದ ಪೆಟ್ಟಾಗಿದ್ದು,ಕುಶಾಲನಗರ ಆಸ್ಪತ್ರೆಗೆ ಕರೆದುಕೊಂಡು ಹೋದಂತಹ ಸಂದರ್ಭದಲ್ಲಿ ಭುವಿನ್ ಕೆ ಎಸ್ ಎಂಬ ವಿದ್ಯಾರ್ಥಿಗೆ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದಾಗ ಆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ ಅಲ್ಲಿಯ ವೈದ್ಯರು ಸುಮಾರು 5-6 ಲಕ್ಷ ರೂಪಾಯಿಗಳು ಬೇಕಾಗುತ್ತದೆಂದೆ ತಿಳಿಸಲಾಗಿ ಮೊದಲು ಬಡವರಾಗಿದ್ದ ವಿದ್ಯಾರ್ಥಿಯ ತಂದೆತಾಯಿಗಳಿಗೆ ದಿಕ್ಕೆ ತೋಚದಾದಂತಹ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಡಾ||ಮಂತರ್ ಗೌಡ ರವರು ಆಸ್ಪತ್ರೆ ಗೆ ಭೇಟಿ ನೀಡಿ ವಿದ್ಯಾರ್ಥಿಗೆ ಧನಸಹಾಯ ಮಾಡಿ,ಮಕ್ಕಳ ತಂದೆತಾಯಿಗಳಿಗೆ ಧೈರ್ಯತುಂಬಿ ವೈದ್ಯರ ಬಳಿ ಮಾತನಾಡಿದ್ದನ್ನು ಕೂಡ ನೆನಪಿಸಿಕೊಳ್ಳುತ್ತಾ,ಈ ವಿಷಯವನ್ನು ತೊರೆನೂರು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯವರಾದ ಶ್ರೀಮತಿ ಸವಿತಾರವರು ಸೋಮವಾರಪೇಟೆ ತಾಲ್ಲೂಕಿನ ಸಂಘಕದ ಕಾರ್ಯದರ್ಶಿಯವರಾದ ರತ್ನಕುಮಾರ ಅವರಿಗೆ ತಿಳಿಸಲಾಗಿ ಸಂಘದ ಅಧ್ಯಕ್ಷರಾದ ಡಿ ಪಿ ಧರ್ಮಪ್ಪರವರ ಬಳಿ ಮಾತನಾಡಿ ಈ ವಿಷಯವನ್ನು ಸೋಮವಾರಪೇಟೆ ಪ್ರೌಢಶಾಲಾ ಸಹಶಿಕ್ಷಕರ ವ್ಯಾಟ್ಸಾಪ್ ಗ್ರೂಪ್ ಅಲ್ಲಿ ಷೇರ್ ಮಾಡಿ ಸಹಾಯವನ್ನು ಮಾಡುವಂತೆ ಮಾಡಿಕೊಂಡು ಮನವಿಗೆ ತಕ್ಷಣ ಸ್ಪಂದಿಸಿದ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರು ಹಾಗೂ ಕೊಡಗು ಜಿಲ್ಲೆಯ ಕೆಲವು ಶಿಕ್ಷಕರು ಕೂಡ ಸಹಾಯ ಮಾಡಿ ಎರಡೆ ದಿನದಲ್ಲಿ ಭುವನ್ ಎಂಬ ವಿದ್ಯಾರ್ಥಿಗೆ ಒಂದು ಲಕ್ಷದ ಸಹಾಯಧನವನ್ನು ಅವರ ತಂದೆಯವರ ಫೋನ್ ನಂಬರ್ ಗೆ ಕಳಿಸಿಕೊಟ್ಟಿದ್ದಾರೆ.ಹಾಗೆಯೆ ಐಶ್ವರ್ಯ ಎಂಬ ವಿದ್ಯಾರ್ಥಿನಿಗೂ ಕೂಡ ಹೃದಯಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಈ ವಿದ್ಯಾರ್ಥಿಯನ್ನು ಚೆಲುವಾಂಬ ಆಸ್ಪತ್ರೆ ಮೈಸೂರಿನಲ್ಲಿ ದಾಖಲು ಮಾಡಿ,ಆ ವಿದ್ಯಾರ್ಥಿನಿಗೂ ಕೂಡ ಸುಮಾರು ಒಂದುಲಕ್ಷದಷ್ಟು ಹಣದ ಅವಶ್ಯಕತೆಯಿದ್ದದ್ದರಿಂದ ತಕ್ಷಣ ಸ್ಪಂದಿಸಿದ ಶಿಕ್ಷಕರು ಅವರ ಅಕ್ಕನ ಫೋನ್ ಪೇ ನಂಬರ್ ಅನ್ನು ತೆಗೆದುಕೊಂಡು 50000 ಸಾವಿರಕ್ಕೂ ಮಿಕ್ಕು ಹಣವನ್ನು ಕಳಿಸಿಕೊಟ್ಟಿದ್ದಾರೆ.ಅಲ್ಲದೆ ಭೂಮಿಕ ಕೆ ಎಸ್ ಎಂಬ ವಿದ್ಯಾರ್ಥಿನಿಗೆ ಕೈ ಮೂಳೆ ಮುರಿದಿದ್ದು ಈ ವಿದ್ಯಾರ್ಥಿನಿಗೆ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಆ ವಿದ್ಯಾರ್ಥಿನಿಗೂ ಕೂಡ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ 25000 ಸಾವಿರ ರೂಪಾಯಿಗಳನ್ನು ನೀಡಿ,ಕಷ್ಟದಲ್ಲಿರುವ ವಿದ್ಯಾರ್ಥಿಗಳ ಕಷ್ಟಕ್ಕೆ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದ ಸೋಮವಾರಪೇಟೆ ತಾಲ್ಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಇನ್ನೂಳಿದ ಶಿಕ್ಷಕರಿಗೂ ಕೂಡ ಸೋಮವಾರಪೇಟೆ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿಯವರಾದ ರತ್ನಕುಮಾರ ಕೆ ಆರ್,ಹಾಗೂ ಅಧ್ಯಕ್ಷರಾದ ಧರ್ಮಪ್ಪ ಡಿ ಪಿ,ಜಯಕುಮಾರ್ ಕೆ ಪಿ,ಶೈಲಾ ಟಿ ವಿ,ಯಶ್ವಂತ್ ಕುಮಾರ್,ಶ್ರೀಕಾಂತ್,ಭರತ್ ಕುಮಾರ್,ಪ್ರಕಾಶ್,ಪೂವಯ್ಯ,ಶಿವಕುಮಾರಿ ಮೇಡಮ್,ರಜನಿ ಮೇಡಮ್,ಬಸವರಾಜು, ಅವರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.ಆ ಮಕ್ಕಳು ಆದಷ್ಟು ಬೇಗ ಗುಣಮುಖರಾಗಿ ಶಾಲೆಗೆ ಬರುವಂತಾಗಲಿ, ಜೊತೆಗೆ ಈ ಭಾಗದ ವಿದ್ಯಾರ್ಥಿಗಳು ಓಡಾಡಲು ಅನುವಾಗುವಂತೆ ಆ ಮಾರ್ಗದಲ್ಲಿ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಸಂಘವೂ ಆಗ್ರಹಿಸುತ್ತದೆ*
Back to top button
error: Content is protected !!