ಆರೋಪ

ನಗರೋತ್ಥಾನ ಕರ್ಮಕಾಂಡ. ರಸ್ತೆಯಲ್ಲಿರಬೇಕಾದ ಡಾಂಬರ್,ಜಲ್ಲಿ ಬೊಗಸೆಯಲ್ಲಿ..

ಸೋಮವಾರಪೇಟೆ, ಮಾ 26: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಒದಗಿಸಿದ ನಗರೋತ್ಥಾನ ಯೋಜನೆ ಗುತ್ತಿಗೆದಾರನ ಅಸಡ್ಡೆಯಿಂದ ಪೋಲಾಗುತಿರುವುದಂತು ಸುಳ್ಳಲ್ಲ.

ಜನರ ಅನುಕೂಲಕ್ಕಾಗಿ ನಿರ್ಮಿಸಿದ ರಸ್ತೆ ಕೆಲವೇ ದಿನಗಳಲ್ಲಿ ಕಿತ್ತುಬರುತಿದ್ದು ,ರಸ್ಟೆಯಲ್ಲಿರಬೇಕಾದ ಡಾಂಬರು ಹಾಗೂ ಜಲ್ಲಿಯೆಲ್ಲಾ ಬಾಚಿದರೆ ಬೊಗಸೆಗೆ ಬರುತಿದೆ.

ವಾರ್ಡ್ ನಮ್ 8 ರ ಚೌಡೇಶ್ವರಿ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ಕೆಲವು ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ.ತಮ್ಮ ಮನೆಯ ಮುಂದೆ ರಸ್ತೆಯಾಗಿದೆ ಎಂದು ಕುಷಿಯಲ್ಲಿದ್ದ ನಿವಾಸಿಗಳಿಗೆ ಕಾಮಗಾರಿ ಮುಗಿದ ಕೆಲದಿನಗಳ ನಂತರ ಕಾಮಗಾರಿಯ ಗುಣಮಟ್ಟ ಬೆಳಕಿಗೆ ಬಂದಿದೆ ಹೆಚ್ಚಾಗಿ ವಾಹನಗಳು ಒಡಾಡದಿದ್ದರು ಜಲ್ಲಿ,ಡಾಂಬರು ಎಲ್ಲಾ ಕಿತ್ತುಬಂದಿದ್ದು ಕೈನಲ್ಲಿಯೆ ಬಾಚಿತೆಗೆಯಬಹುದಾಗಿದೆ.

ಹೆಸರಿಗೆ ರಸ್ತೆ ಡಾಂಬರಿಕರಣವಾದರು ಈ ರಸ್ತೆಗೆ ದಪ್ಪ ಜಲ್ಲಿಯನ್ನೆ ಬಳಸದೆ ಕೇವಲ ಸೀಲ್ಕೊಟ್ ಹಾಕಿ ರೋಲ್ ಮಾಡಲಾಗಿದೆ ಹಾಕಿದ ಕೆಲವೇ ದಿನಗಳಲ್ಲಿ ಎದ್ದು ಬರುತಿದೆ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನ ವಾಗಲಿಲ್ಲ.ಪುನಃ ರಸ್ತೆ ಕಾಮಗಾರಿ ನಡೆಸಿಕೊಡಬೇಕು ಎಂದು ವಾರ್ಡ್ ಸದಸ್ಯ ಶುಭಕರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!