ಕುಶಾಲನಗರ, ಜು 12 : ಮಹಿಳೆ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಳೆತ ಹಾಗೂ ವಾಸನೆ ಭರಿತ ಕೋಳಿ ಮೊಟ್ಟೆಗಳನ್ನು ವಿತರಿಸಿರುವ ಕುರಿತು ಪಲಾನುಭವಿ ಕೂಡಿಗೆ ಭಾಗದ ಹಲವು ಫಲಾನುಭವಿ ಮಹಿಳೆಯರು ದೂರಿದ್ದಾರೆ.
ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಕೂಡಿಗೆಯ ಬಾಣಂತಿ ಮಹಿಳೆ ಗೀತಾ ಎಂಬವರಿಗೆ ನೀಡಿದ್ದ ಮೊಟ್ಟೆಗಳನ್ನು ಬೇಯಿಸಿ ನೋಡಿದಾಗ ಅವುಗಳು ಕಪ್ಪು ಬಣ್ಣಕ್ಕೆ ತಿರುಗಿ ವಾಸನೆಯುಕ್ತವಾಗಿದ್ದ ಬಗ್ಗೆ ದೂರಲಾಗಿದೆ.
ಒಂದು ವೇಳೆ ಈ ಕೊಳೆತ ಸ್ಥಿತಿಯಲ್ಲಿನ ಕಳಪೆ ಮೊಟ್ಟೆಗಳನ್ನು ತಿಂದಿದ್ದಲ್ಲಿ ಬಾಣಂತಿ ಮಹಿಳೆ ಹಾಗೂ ಶಿಶುಗಳ ಆರೋಗ್ಯದ ಸ್ಥಿತಿ ಯಾವ ದುಸ್ಥಿತಿ ತಲುಪುತ್ತಿತ್ತೋ ಏನೋ ಎಂದು ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಹಾಗೂ ಎಳೆಯ ಹಸುಳೆಗಳ ಆರೋಗ್ಯದ ಹಿತ ದೃಷ್ಟಿಯಿಂದ ನೀಡುತ್ತಿರುವ ಪೌಷ್ಠಿಕ ಆಹಾರವಾದ ಉತ್ತಮ ಗುಣಮಟ್ಟದ ಮೊಟ್ಟೆಯನ್ನು ನೀಡುವಲ್ಲಿ ಬೇಜವಬ್ದಾರಿ ತೋರಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.
Back to top button
error: Content is protected !!