ಕುಶಾಲನಗರ, ಜು 10: ಕುಶಾಲನಗರ ನಗರ ಪೊಲೀಸ್ ವ್ಯಾಪ್ತಿಯ ರಥಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿಯಲ್ಲಿ ದಿನಾಂಕ 05.06.2023 ರಂದು ಇಬ್ಬರು ಬುರ್ಖಾಧಾರಿ ಹೆಂಗಸರು ಮತ್ತು ಒಬ್ಬ ಯುವಕ ಜ್ಯುವೆಲ್ಲರಿ ಅಂಗಡಿಗೆ ಚಿನ್ನಾಭರಣಗಳ ಖರೀದಿಸುವ ನೆಪದಲ್ಲಿ ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ಸುಮಾರು 22.4 ಗ್ರಾಂ ತೂಕದ ಚಿನ್ನಾಭರಣಗಳ ಬದಲಿಗೆ ನಕಲಿ ಆಭರಣಗಳನ್ನು ಬದಲಾಯಿಸಿ ಮೋಸ ಮಾಡಿ ನಾಪತ್ತೆಯಾಗಿದ್ದ ಆರೋಪಿಗಳನ್ನು ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವೃತ್ತನಿರೀಕ್ಷಕ, ಮಹೇಶ್.ಬಿ.ಜಿ, ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದಿ: 05-07-2023 ರಂದು ಚಿತ್ರದುರ್ಗ ಜಿಲ್ಲೆ ಭರಮಸಾಗರ ಪಾಮರಹಳ್ಳಿ ಗ್ರಾಮದ ವಾಸಿಗಳಾದ ಕೈರುನ್, 46 ವರ್ಷ, ಜೈರಾಭಿ, 36 ವರ್ಷ ಎಂಬುವವರನ್ನು ದಸ್ತಗಿರಿ ಮಾಡಿ 22.34 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಎಸ್ಪಿ ಕೆ. ರಾಮರಾಜನ್ ಶ್ಲಾಘಿಸಿರುತ್ತಾರೆ.
Back to top button
error: Content is protected !!