ಕಾರ್ಯಕ್ರಮ
ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕುಶಾಲನಗರ, ಜೂ 29: ಕುಶಾಲನಗರದ ರೋಟರಿ ಕ್ಲಬ್ ನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಸಭಾಂಗಣದಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಸುನೀತಾಮಹೇಶ್ ಕಾರ್ಯದರ್ಶಿಯಾಗಿ ಕೆ.ಎಸ್.ಶಿರ್ಲಿ, ಖಜಾಂಜಿಯಾಗಿ ರಿಚರ್ಡ್ ಡಿಸೋಜ ಅಧಿಕಾರ ಸ್ವೀಕರಿಸಿದರು.
ಪೂರ್ವ ಜಿಲ್ಲಾ ಗೌರ್ನರ್ ಎಂ.ಎಂ.ಸುರೇಶ್ ಚಂಗಪ್ಪ
ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಿಕೊಟ್ಟರು. ನಂತರ ಮಾತನಾಡಿದ ಅವರು,
ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಿರುವ ಕಾರಣ ಈ ಬಾರಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದಂತಾಗಿದೆ.ಮಹಿಳೆಯರು ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ
ಕುಶಾಲನಗರ ರೋಟರಿ ಕ್ಲಬ್ ಅನ್ನು ಇತರೆ ಕ್ಲಬ್ ಗಳಿಗೆ ಮಾದರಿಯಾಗಿ ರೂಪಿಸಬೇಕು ಎಂದು ಹೇಳಿದರು.ಸಹಾಯಕ ಗೌರ್ನರ್ ಎಂ.ಡಿ.ಲಿಕೀತ್ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ರೋಟರಿ ಸಂಸ್ಥೆಯ ಸದಸ್ಯರು ವೈಯಕ್ತಿಕವಾಗಿ ತನ್ನ ಸಾಮಥ್ರ್ಯವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವಂತಾಗಬೇಕು. ರೋಟರಿ ಸದಸ್ಯರು ತಾವು ಮಾಡುವ ಸೇವಾ ಕಾರ್ಯಗಳಲ್ಲಿ ನಿಗಧಿತ ಗುರಿ ಇಟ್ಟುಕೊಂಡು ಸಮಾ ಜಸೇವೆಗೆ ಮುಂದಾಗಬೇಕು ಹಾಗೂ ಸ್ವಾವಲಂಬಿಗಳು, ದುರ್ಬಲರಿಗೆ, ಕಡುಬಡ ವರಿಗೆ ಸಹಾಯ ಹಸ್ತ ನೀಡಬೇಕು ಎಂದರು.
ಇದೇ ಸಂದರ್ಭ ಅಂಗನವಾಡಿ ಮಕ್ಕಳಿಗೆ ಚಾರ್ಟ್ ಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಲಬ್ ನ ಸಹಾಯಕ ಗೌರ್ನರ್ ಎಸ್.ಕೆ.ಸತೀಶ್,ನಿಕಟ ಪೂರ್ವ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿಬು ಥಾಮಸ್, ಪೂರ್ವ ಸಹಾಯಕ ಗೌರ್ನರ್ ಮಹೇಶ್ ನಾಲ್ವಡಿ, ಕ್ಲಬ್ ಸಲಹೆಗಾರ ಎಂ.ಡಿ.ರಂಗಸ್ವಾಮಿ,ನಿರ್ದೇಶಕ ಡಾ.ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಪದಗ್ರಹಣ ಸಮಾ ರಂಭಕ್ಕೆ ಶನಿವಾರಸಂತೆ, ಸೋಮವಾರ ಪೇಟೆ, ಸುಂಟಿಕೊಪ್ಪ, ಗೋಣಿಕೊಪ್ಪ, ಮಡಿಕೇರಿ, ಮಡಿಕೇರಿಯ ಮಿಸ್ಟಿ ಹಿಲ್ಸ್, ಹುಣಸೂರು, ಪಿರಿಯಾ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.
ನೂತನ ಸಾಲಿನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ:
2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀತಾ ಮಹೇಶ್ , ಕಾರ್ಯದರ್ಶಿಯಾಗಿ ಕೆ.ಎಸ್.ಶಿರ್ಲಿ ಖಜಾಂಚಿಯಾಗಿ ರಿಚರ್ಡ್ ಡಿಸೋಜ, ನಿದೇರ್ಶಕರುಗಳಾಗಿ ರಾಣಿ ಉಲ್ಲಾಸ್,ಎಂ.ಎಂ.ಸಂತೋಷ್,ಪಿ.ನವೀನ್,ಉಮಾಶಂಕರ್,ಶೋಭಾಸತೀಶ್,ಡಾ.ಧರಣೇಂದ್ರ,ಕಿರಣ್‌ದೇವಯ್ಯ,ಜಾಕೋಬ್,ರಮೇಶ್ ಕುಮಾರ್,ಎನ್.ಜಿ.ಪ್ರಕಾಶ್,ಟಿ.ವಿ.ರವಿ,ಆರತಿ ಎಚ್.ಶೆಟ್ಟಿ ಆಯ್ಕೆಯಾಗಿದ್ದಾರೆ.