ಕುಶಾಲನಗರ, ಜೂ 16: ಕೂಡ್ಲೂರು ಗ್ರಾಮದಲ್ಲಿ ಶಾಸಕ ಮಂಥರ್ ಗೌಡ ಅವರಿಗೆ ಅಭಿನಂದನಾ ಸಭೆ ಮತ್ತು ಕೃತಜ್ಞತಾ ಸಲ್ಲಿಕೆ ಸಭೆ ಹಮ್ಮಿಕೊಳ್ಳಲಾಯಿತು.
ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಮಾನ ಮನಸ್ಕರ ಸಭೆಯಲ್ಲಿ ಶಾಸಕರು ಸಹಕಾರ ತೋರಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭ ನೆರೆದಿದ್ದ ಪ್ರಮುಖರು ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಕುಶಾಲನಗರದ ಅಭಿವೃದ್ದಿಗೆ ತಮ್ಮ, ಸಲಹೆ, ಅಹವಾಲು ಸಲ್ಲಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ ಮುತ್ತಪ್ಪ, ಪ್ರಮುಖರಾದ ಕೆ.ಕೆ.ಮಂಜುನಾಥ್ ಕುಮಾರ್, ಆರ್.ಕೆ.ನಾಗೇಂದ್ರಬಾಬು, ಜೋಸೆಫ್ ವಿಕ್ಟರ್ ಸೋನ್ಸ್, ಟಿ.ಪಿ.ಹಮೀದ್, ವಿ.ಎಸ್.ಆನಂದಕುಮಾರ್, ಜಿ.ಬಿ.ಜಗದೀಶ್, ವಿ.ಸಿ.ಅಮೃತ್, ಶರತ್, ಡಿ.ವಿ.ರಾಜೇಶ್, ಮೋಹನ್ ಕುಮಾರ್ ಮತ್ತಿತರರು ಇದ್ದರು.
Back to top button
error: Content is protected !!