ಕುಶಾಲನಗರ, ಮೇ 19:ಕುಶಾಲನಗರ ಪುರಸಭೆಯ ವ್ಯಾಪ್ತಿಯಲ್ಲಿ “ನನ್ನ ಜೀವನ ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ಮೇ 20 ರಿಂದ ಜೂನ್ 05 ರವರೆಗೆ ಹಮ್ಮಿಕೊಳ್ಳಲಾಗಿದೆ.
ಅದರಂತೆ ಪಟ್ಟಣದ ವ್ಯಾಪ್ತಿಯ ನಾಗರಿಕರಿಗೆ/ಸಾರ್ವಜನಿಕರಿಗೆ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯನ್ನು ತೊಡಗಿಸಿಕೊಳ್ಳಲು (RRR), ಆಂದೋಲನ ಹಮ್ಮಿಕೊಳ್ಳಲಾಗಿದೆ. ತ್ಯಾಜ್ಯದ ಪ್ರಮಾಣ ಕಡಿತಗೊಳಿಸುವುದು, ಮರುಬಳಕೆ, ಪುನರ್‌ಬಳಕೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಆಟದ ವಸ್ತುಗಳು, ಹಳೆಯ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ವಿದ್ಯುತ್ ಬಿಡಿ ಸಾಮಗ್ರಿಗಳನ್ನು ಸಂಗ್ರಹಿಸಿ ಪುರಸಭೆ ತ್ಯಾಜ್ಯ ಸಂಗ್ರಹಣೆಗೆ ಬರುವ ವಾಹನಗಳಿಗೆ ನೀಡಬಹುದಾಗಿದೆ.
ಬೆಳಗ್ಗೆ 07:00 ರಿಂದ ಮದ್ಯಾಹ್ನ 01:00 ಗಂಟೆಯವರೆಗೆ ಹಳೆ ಸಂತೆ ಮೈದಾನದ ಹತ್ತಿರದಲ್ಲಿ ಆರ್.ಆರ್.ಆರ್. ಕೇಂದ್ರವನ್ನು ತೆರೆಯಲಾಗಿದೆ ಹಾಗೂ ಮುಳ್ಳುಸೋಗೆ ಮತ್ತು ಗುಮ್ಮನಕೊಲ್ಲಿ ಭಾಗದವರು ಮುಳ್ಳುಸೋಗೆಯ ಕಸ ವಿಂಗಡಣಾ ಘಟಕದಲ್ಲಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Back to top button
error: Content is protected !!