ರಾಜ್ಯ

ಅಗಲಿದ ಬಲರಾಮನಿಗೆ ಅಂತಿಮ ವಿದಾಯ

ಕುಶಾಲನಗರ, ಮೇ 09: ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಭೀಮನಕಟ್ಟೆ ಆನೆಕ್ಯಾಂಪಿನಲ್ಲಿ ಭಾನುವಾರ ಅನಾರೋಗ್ಯದಿಂದ ಮೃತಪಟ್ಟಿದ್ದ ಬಲರಾಮ ಆನೆಯ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಹುಣಸೂರು ವಲಯದ ಭೀನಮಕಟ್ಟೆ ಸಾಕಾನೆ ಶಿಬಿರದಲ್ಲಿ ಕ್ಷಯರೋಗದಿಂದ ಮೃತಪಟ್ಟ ಬಲರಾಮ ಆನೆಯನ್ನು ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಪೂಜೆ, ವಿಧಿವಿಧಾನ ನೆರವೇರಿಸಿ, ಸರಕಾರಿ ಗೌರವ ಸಲ್ಲಿಸಿ, ಮೂರು ಸುತ್ತು ಕುಶಲತೋಪು ಹಾರಿಸಿದ ನಂತರ ಮಣ್ಣಿನಲ್ಲಿ ಹೂತು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅರಮನೆ ಗೌರವ:
ಮೈಸೂರು ಅರಸರ ಕುಟುಂಬದ ಶೃತಿ ಕೀರ್ತಿದೇವಿ ಅರಸುರವರು ಅರಮನೆಯ ಪುರೋಹಿತರೊಂದಿಗೆ ಆಗಮಿಸಿ ಶಾಸ್ತ್ರೋಕ್ತವಾಗಿ ಆನೆಗೆ ಅಂತಿಮ, ಪೂಜೆ ಮತ್ತು ವಿಧಿವಿದಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಕಾರಿ ಮಾಲತಿ ಪ್ರಿಯ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ, ಡಿ.ಸಿ.ಎಫ್. ಸೀಮಾಪಿ.ಎ, ಸೌರಭ್ ಕುಮಾರ್, ಶರಣ ಬಸಪ್ಪ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಕಾರಿಗಳು ಜೊತೆಗೆ ಬಲರಾಮ ಆನೆಯ ಮಾವುತ ತಿಮ್ಮ ಹಾಗೂ ಕುಟುಂಬಸ್ಥರು, ಕಾವಾಡಿ ಮಂಜುನಾಥ ಹಾಗೂ ಬಲರಾಮ ಆನೆಯನ್ನು ಹಲವುದಿನಗಳಿಂದ ಆರೈಕೆ ಮಾಡಿದ ಪಶುವೈದ್ಯರಾದ ಡಾ.ರಮೇಶ್, ಡಾ.ನಾಗರಾಜು ಹಾಗೂ ಡಾ.ಮುಜೀಬ್ ಮತ್ತಿತರರು ಹಾಜರಿದ್ದರು.

ಕಂಬನಿ: ೧೪ ಬಾರಿ ಅಂಬಾರಿ ಹೊತ್ತಿದ್ದ ಬಲರಾಮನ ಸಾವಿಗೆ ರಾಜಮನೆತನದವರು, ಕವಾಡಿ ಮಾವುತರು ಮತ್ತವರ ಕುಟುಂಬದವರು ನೆಚ್ಚಿನ ಬಲರಾಮನ ಸಾವಿಗೆ ಕಂಬಿನಿ ಮಿಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!