ಕುಶಾಲನಗರ, ಜ 24: ಕೊಡಗು-ಮೈಸೂರು ಗಡಿ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಸಮೀಪದ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಕಾವೇರಿ ನೀರಾವರಿ ನಿಗಮದ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೊಪ್ಪ ಗೆ ಆಗಮಿಸಿದರು.
ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿಗಳು ಬೈಲುಕೊಪ್ಪೆ ಕ್ಯಾಂಪ್ ನಂಬರ್ 1 ರಲ್ಲಿನ ಸೆಂಟ್ರಲ್ ಸ್ಕೂಲ್ ಫಾರ್ ಟಿಬೇಟಿಯನ್ ಮೈದಾನಕ್ಕೆ ತಲುಪಿದ್ದಾರೆ. ಮುತ್ತಿನ ಮುಳ್ಳುಸೋಗೆಯಲ್ಲಿ ನೀರೆತ್ತುವ ಯೋಜನೆಗೆ ಚಾಲನೆ ನೀಡಿ ಭಾರತ್ ಮಾತಾ ಶಾಲಾ ಮುಂಭಾಗದ ಮೈದಾನದಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Back to top button
error: Content is protected !!