ಕುಶಾಲನಗರ, ಏ 22: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ರೋಡ್ ಹಂಪ್ಸ್ ಅಪಾಯಕಾರಿಯಾಗಿದ್ದು ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುತ್ತಿದೆ.
ಉದ್ಭವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಕಮಾನು ಬಳಿಯಿರುವ ಈ ಹಂಪ್ಸ್ ಸಾಧಾರಣವಾಗಿ ಗೋಚರಿಸುವ ಮಾದರಿಯಲ್ಲಿಲ್ಲ. ಯಾವುದೇ ರೀತಿಯ ಮಾರ್ಕಿಂಗ್ ಅಥವಾ ರಿಫ್ಲೆಕ್ಟರ್ ಇಲ್ಲದ ಕಾರಣ ಬಹುತೇಕ ಸವಾರರಿಗೆ ಇದು ಸರಿಯಾಗಿ ಗೋಚರಿಸದೆ ಬಂದ ವೇಗದಲ್ಲಿಯೇ ಹಂಪ್ಸ್ ಮೇಲಿಂದ ವಾಹನ ಹಾರಿಸಿಕೊಂಡು ಹೋಗುವು ಅಪಾಯಕಾರಿ ಸ್ಥಿತಿ ಎದುರಾಗಿದೆ.
ಶನಿವಾರ ಕೂಡ ಕಬ್ಬಿಣ ಸಲಾಕೆಗಳನ್ನು ಹೊತ್ತು ಸಾಗುತ್ತಿದ್ದ ಪಿಕ್ ಅಪ್ ವಾಹನ ಕೂಡ ಬಂದ ವೇಗದಲ್ಲಿಯೇ ಹಂಪ್ಸ್ ಹಾರಿಸಿದ ಪರಿಣಾಮ ವಾಹನದ ಮೇಲಿದ್ದ ಸಲಾಕೆಗಳು ರಸ್ತೆಗುರುಳಿವೆ.
ಅದೃಷ್ಟವಶಾತ್ ಮುಂಭಾಗ ಯಾವುದೇ ವಾಹನಗಳಿಲ್ಲದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಘಟನೆಯಲ್ಲಿ ಪಿಕ್ ಅಪ್ ವಾಹನದ ಮುಂಭಾಗದ ಮಿರರ್ ಹಾನಿಯಾಗಿದೆ.
ಇದೇ ಮಾದರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸಂಬಂಧಿಸಿದ ಗ್ರಾಪಂ ಅಥವಾ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮಕೈಗೊಂಡು ಹಂಪ್ಸ್ ಗೋಚರಿಸುವಂತೆ ಮಾಡಬೇಕಿದೆ ಎಂದು ಸ್ಥಳೀಯ ವರ್ತಕ ಬಿ.ವಿ.ಅರುಣ್ ಆಗ್ರಹಿಸಿದ್ದಾರೆ.
Back to top button
error: Content is protected !!