ಕುಶಾಲನಗರ, ಮಾ 08: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ತಮ್ಮ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಮಹಿಳಾ ಉಪನ್ಯಾಸಕರಿಗೆ ವಿಶ್ವ ಮಹಿಳಾ ದಿನದ ಶುಭಾಶಯಗಳನ್ನು ಕೋರಿ ಮಹಿಳೆಯರಿಂದ ಕೇಕ್ ಕತ್ತರಿಸಿ ಸಿಹಿ ಹಂಚುವುದರೊಂದಿಗೆ ದಿನದ ಶುಭಾಶಯಗಳನ್ನು ಕೋರಿದರು.
ಈ ಸರಳ ಕಾರ್ಯಕ್ರಮದಲ್ಲಿ ಐಶ್ವರ್ಯ ಪಿಯು ಕಾಲೇಜಿನ ಮಹಿಳಾ ಉಪನ್ಯಾಸಕರು, ಮುರಾರ್ಜಿ ದೇಸಾಯಿ ಕಾಲೇಜಿನ ಉಪನ್ಯಾಸಕಿಯರು ಹಾಗೂ ಮೂಕಾಂಬಿಕಾ ಕಾಲೇಜಿನ ಉಪನ್ಯಾಸಕಿಯರು ಭಾಗವಹಿಸಿದ್ದರು.
Back to top button
error: Content is protected !!