ಕುಶಾಲನಗರ, ಮಾ 07: ಕುಶಾಲನಗರದ ರಥಬೀದಿಯ ಜನ ಔಷಧಿ ಕೇಂದ್ರದಲ್ಲಿ ಐದನೇ ವರ್ಷದ
ಜನೌಷಧಿ ದಿನ ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯ ಬಿ.
ಅಮೃತ್ ರಾಜ್ ಹಾಗೂ ಸ್ಥಳೀಯ ವೈದ್ಯ ರಾಧಾಕೃಷ್ಣ ಮಾತನಾಡಿ, ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಗಳು ಲಭ್ಯವಿದ್ದು, ಬಡವರಿಗೆ ಕೇಂದ್ರ ಸರ್ಕಾರದ ಯೋಜನೆಯಿಂದ ಅತ್ಯಂತ ಉಪಕಾರವಾಗಿದೆ ಎಂದು ತಿಳಿಸಿದರು.
ಕೊಡಗಿನ ಮೊದಲ ಜನ ಔಷಧಿ ಕೇಂದ್ರವಾದ ಕುಶಾಲನಗರದಲ್ಲಿ ಜನತೆಗೆ ಅತ್ಯಂತ ಉಪಯುಕ್ತಕಾರಿಯಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಗಳ ಈ ಕನಸಿನ ಯೋಜನೆ ಅತ್ಯಂತ ಯಶಸ್ವಿಯಾಗಲು ಕಾರಣರಾದ ವೈದ್ಯಾಧಿಕಾರಿಗಳು, ಗ್ರಾಹಕರಿಗೆ ಹಾಗೂ ಕರ್ನಾಟಕದಲ್ಲಿ ಪ್ರಾರಂಭದಲ್ಲಿ ಜನ ಔಷಧಿಯನ್ನು ತೆರೆದ ಎಲ್ಲಾ ಮಾಲೀಕರಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭ
ಜನ ಔಷಧಿ ಕೇಂದ್ರದ ಮಾಲೀಕರಾದ ಹರೀಶ್, ಲಕ್ಷ್ಮಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.
Back to top button
error: Content is protected !!