ಕಾರ್ಯಕ್ರಮ

ಕೂಡಿಗೆ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಅರಿವು ಕಾರ್ಯಗಾರ

ಕುಶಾಲನಗರ ಮಾ 03: ಕೂಡಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಯ ನಿರ್ದೇಶದಂತೆ ವಿಭಾಗದ ಮಟ್ಟದ ಸೆಕ್ಟರ್ ಅಧಿಕಾರಿಗಳಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತದಾನ ಚಲಾವಣೆಯ ಬಗ್ಗೆ ಅರಿವು ಕಾರ್ಯಗಾರ ನಡೆಯಿತು.
ಕಳೆದ ಚುನಾವಣಾ ಸಂದರ್ಭದಲ್ಲಿ ಕಡಿಮೆ ಮತದಾನವಾದ ಮತಕಟ್ಟೆಯ ವ್ಯಾಪ್ತಿಯಲ್ಲಿ ಮತದಾನವನ್ನು ಯಾವುದೆ ರೀತಿಯ ನಿರ್ಭಯದಲ್ಲಿ, ಗುಪ್ತವಾಗಿ ಮತದಾನ ಮಾಡುವ ಬಗ್ಗೆ ಮತಯಂತ್ರಗಳ ಜೋಡಣೆ ಮಾಡುವ ಮೂಲಕ ಅಣಕು ಪ್ರದರ್ಶನವನ್ನು ಕಾವೇರಿ ನೀರಾವರಿ ನಿಗಮದ ಹಾರಂಗಿ‌ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ನವರು ಮತಯಂತ್ರವನ್ನು ಜೋಡಣೆ ಮಾಡಿ ಮತದಾನವನ್ನು ಮಾಡುವ ಬಗ್ಗೆ ಸಮಗ್ರವಾಗಿ ತಿಳಿಸಿದರು..
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಿಗೆ106, 144 ,145 146,148 149 ಮತ್ತು 150 ರ ಕೂಡಿಗೆ ಮತ್ತು ಮಾದಲಾಪುರ ವ್ಯಾಪ್ತಿಯ ಗ್ರಾಮಗಳ ಮತಕಟ್ಟೆಗಳಲ್ಲಿ ಮತದಾರರಿಗೆ ಅಣಕು ಪ್ರದರ್ಶನವನ್ನು ನೀಡಲಾಯಿತು.
‌ಈ ಸಂದರ್ಭದಲ್ಲಿ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಜಲಾದೇವಿ, ಕಾರ್ಯದರ್ಶಿ ಪುನಿತ್, ಸೇರಿದಂತೆ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಮತದಾರರು, ಅಯಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು ಪೋಲೀಸ್ ಇಲಾಖೆಯ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!