ಕಾರ್ಯಕ್ರಮ

ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ

ಕುಶಾಲನಗರ, ಫೆ 13: ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ಅದ್ಧೂರಿಯಾಗಿ ನಡೆಯಿತು.ಅನುಗ್ರಹ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ  ಎಸ್.ಕೆ ಸತೀಶ್, ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾದ  ಟಿ.ವಿ.ಪಂಡರಿನಾಥ ನಾಯ್ಡು ಮತ್ತು ಆರ್.ಕೆ. ನಾಗೇಂದ್ರಬಾಬುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ  ನಾಗೇಂದ್ರಬಾಬುರವರು ‘ ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳು.ದೇಶ ಕಟ್ಟುವ ಕಾಯಕದಲ್ಲಿ ವಿದ್ಯಾರ್ಥಿಗಳ ಜವಬ್ದಾರಿ ಏನೆಂಬುದನ್ನು ತಿಳಿಸುವುದರ ಜೊತೆಗೆ ವಿದ್ಯೆಯ ಜೊತೆ ವಿನಯತೆ ಬೆಳೆಸಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ’ ಎಂದು ಕಿವಿಮಾತು ಹೇಳಿದರು. ಪಿಯು ವಿಭಾಗದ ಉಪಪ್ರಾಂಶುಪಾಲೆಯಾದ ಶ್ವೇತರವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಇತಿಹಾಸ ಉಪನ್ಯಾಸಕಿ  ಸೀಮಾರವರು ವಿದ್ಯಾರ್ಥಿಗಳನ್ನು‌ ಉದ್ದೇಶಿಸಿ ಮಾತನಾಡಿ ಶಿಸ್ತು, ಸಮಯಪಾಲನೆಯನ್ನು‌ ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಹಸನಾಗುವುದಕ್ಕೆ ಸಾಧ್ಯ.ಹದಿಹರೆಯದ ಸಹಜ ಆಕರ್ಷಣೆಗಳಿಗೆ ಒಳಗಾಗದೆ, ಉತ್ತಮ ಸ್ನೇಹಿತರ ಸಹವಾಸದಿಂದ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ಕರೆ‌ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಕೆ.ಸತೀಶ್ ರವರು ತಮ್ಮ‌ ಅಧ್ಯಕ್ಷೀಯ ಭಾಷಣದಲ್ಲಿ ‘ ಪ್ರತಿಯೊಂದು ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ.ಪ್ರತಿಭೆಯ ಅನಾವರಣಕ್ಕೆ ಶಾಲಾ ಕಾಲೇಜುಗಳು ಉತ್ತಮ ವೇದಿಕೆಯನ್ನು ಒದಗಿಸುತ್ತವೆ.ದೇಶದ ಮಹಾನ್ ವ್ಯಕ್ತಿಗಳೆಲ್ಲರೂ ತಮ್ಮ ಸತತ ಪ್ರಯತ್ನದಿಂದಲೇ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.ಅಂತಹ‌ ಮಹಾನ್ ವ್ಯಕ್ತಿ ನಿಮ್ಮೊಳಗೂ ಇರಬಲ್ಲ. ಸಾಧಿಸುವ ಛಲ, ಪ್ರಯತ್ನ ಮುಖ್ಯ ಎಂದು ನುಡಿದರು.ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.ಕಾಲೇಜಿನ ಉಪನ್ಯಾಸಕರಾದ  ಸೌಮ್ಯ,  ರಕ್ಷಾಪ್ರಿಯ,  ಅಭಿಷೇಕ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದರೊಂದಿಗೆ ಎಲ್ಲರನ್ನು ರಂಜಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಟಿ.ವಿ ಪಂಡರಿನಾಥ ನಾಯ್ಡುರವರು ಸರ್ವರನ್ನು ಸ್ವಾಗತಿಸಿದರು.ಸೀಮಾ ವಂದಿಸಿದರು.ವಿದ್ಯಾರ್ಥಿಗಳಾದ ದರ್ಶನ್, ಅಲಿನ, ಚಂದನ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ- ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!