ಕ್ರೈಂ

ತೆರೆದ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕುಶಾಲನಗರ, ಫೆ 13: ಸಾರ್ವಜನಿಕ ಸ್ಥಳದಲ್ಲಿದ್ದ ತುಂಬಿದ್ದ ತೆರೆದ ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆಯಲ್ಲಿ‌ ನಡೆದಿದೆ. ವಿರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ ಕಲ್ಲುಕೋರೆ ನಿವಾಸಿ ಕೂಲಿ ಕಾರ್ಮಿಕ ರವಿ (50) ಆತ್ಮಹತ್ಯೆ ಮಾಡಿಕೊಂಡವ.‌ಮೂಲತಃ ಈತ ಮೈಸೂರು ಜಿಲ್ಲೆಯ ಬೆಟ್ಟದಪುರ ನಿವಾಸಿ. ವಿರಾಜಪೇಟೆ ನಗರದಲ್ಲಿ ಜೀವನ ಸಾಗಿಸುತಿದ್ದ ಎನ್ನಲಾಗಿದೆ. ಮೃತ ವ್ಯಕ್ತಿಯು ಕುಡಿತ ಚಟಕ್ಕೆ ದಾಸನಾಗಿದ್ದು ಫೆ.12 ರಂದು ಮನೆಯಿಂದ ತೆರಳಿದವನು ಹಿಂದುರಗಲಿಲ್ಲಾ. ಸೋಮವಾರ ಮುಂಜಾನೆ ವಿರಾಜಪೇಟೆ ನಗರದ ಶಾಂತ ಚಿತ್ರಮಂದಿರದ ಸಮೀಪದ ತೆರದ ಬಾವಿಯಲ್ಲಿ ಈತನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ವಿವಾಹಿತನಾಗಿದ್ದು ಪತ್ನಿ ನಾಗರತ್ನ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!