ಕಾರ್ಯಕ್ರಮ

5 ಲಕ್ಷ ವೆಚ್ಚದಲ್ಲಿ ಮೈದಾನ ನಿರ್ಮಾಣ ಕಾರ್ಯ ಪೂರ್ಣ: ಗಿಡ ನೆಡುವ ಕಾರ್ಯಕ್ಕೆ ಚಾಲನೆ

ದಿನೇಶ್, ಸಿಸಿ ಸ್ವಾಮಿ ನೇತೃತ್ವದಲ್ಲಿ ಚಿಕ್ಕತ್ತೂರಿನಲ್ಲಿ‌ ನಿರ್ಮಾಣಗೊಂಡ ಸುಂದರ ಮೈದಾನ

ಕುಶಾಲನಗರ, ಫೆ 05: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಆನೆಕೆರೆ ಸಮೀಪ ಗ್ರಾಮಸ್ಥರು ಒಗ್ಗೂಡಿ ಮೈದಾನ ನಿರ್ಮಾಣ ಮಾಡಿದ್ದಾರೆ.
ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳಲ್ಲಿ ಸುಸಜ್ಜಿತ ‌ಮೈದಾನದ ಕೊರತೆ ಕಾರಣ ಈ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರದ ಯಾವುದೇ ಅನುದಾನ ಪಡೆಯದೆ ಗ್ರಾಮಸ್ಥರೇ ತಮ್ಮ ಸ್ವಂತ ಖರ್ಚಿನಲ್ಲಿ ರೂ 5 ಲಕ್ಷ ವೆಚ್ಚದಲ್ಲಿ‌ಈ‌ ಮೈದಾನ ನಿರ್ಮಿಸಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ‌.
ಗ್ರಾಪಂ ಸದಸ್ಯ ದಿನೇಶ್, ಮಾಜಿ ಉಪಾಧ್ಯಕ್ಷ ಸಿ.ಸಿ.ಸ್ವಾಮಿ ಅವರು ಈ ಮೈದಾನ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಈ ಭಾಗದ ಗ್ರಾಮಸ್ಥರು ಮೈದಾನ ಸುತ್ತಲೂ ಗಿಡಗಳನ್ನು ‌ನೆಟ್ಟು ಬೆಳೆಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಈ ಭಾಗದ ಗ್ರಾಮ ಪಂಚಾಯತ್ ಸದಸ್ಯ ದಿನೇಶ್, ಮೈದಾನ ಕೊರತೆ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಅವರ ಗಮನಕ್ಕೆ ತರಲಾಯಿತು. ಶಾಸಕರ ಸೂಚನೆಯಂತೆ ಕೆರೆ ಬಳಿಯಿರುವ ಕಂದಾಯ ಇಲಾಖೆ ಜಾಗ ಬಳಸಿಕೊಳ್ಳಲು ನೀಡಿದ ಸೂಚನೆ‌ ಮೇರೆಗೆ ಮೈದಾನ ನಿರ್ಮಾಣ ಕಾಮಗಾರಿ ಆರಂಭಿಸಿ‌ 10 ದಿನಗಳಲ್ಲಿ ಸುಂದರ ಮೈದಾನ ನಿರ್ಮಾಣವಾಗಿದೆ. ಎರಡು ಎಕರೆ ಪ್ರದೇಶದಲ್ಲಿ ರೂ 5 ಲಕ್ಷ ವ್ಯಯಿಸಿ ಮೈದಾನ ನಿರ್ಮಿಸಲಾಗಿದೆ. ಶಾಸಕರು ಈ ಕಾಮಗಾರಿಗೆ ವೈಯಕ್ತಿಕವಾಗಿ ರೂ 50 ಸಾವಿರ ಒದಗಿಸಿದ್ದಾರೆ. ಉಳಿದ ಸಂಪೂರ್ಣ ಹಣ ಗ್ರಾಮಸ್ಥರು, ದಾನಿಗಳು ನೀಡಿದ್ದಾರೆ. ಸಧ್ಯದಲ್ಲೇ ರೂ 1 ಲಕ್ಷ ವೆಚ್ಚದಲ್ಲಿ ಮೈದಾನ ಸುತ್ತಲೂ ಕುಳಿತುಕೊಳ್ಳಲು ಬೆಂಚ್ ಅಳವಡಿಕೆ ಕಾರ್ಯ ನಡೆಸಲಾಗುತ್ತದೆ ಎಂದರು.
ಆದಷ್ಟು ಬೇಗ ಈ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ದಪಡಿಸಿ ಒದಗಿಸುವಂತೆ ಶಾಸಕರನ್ನು ದಿನೇಶ್ ಕೋರಿದರು.
ಇದೇ ಸಂದರ್ಭ ಬಿಜೆಪಿ ಸಂಕಲ್ಪ ಅಭಿಯಾನ ಕೂಡ ನಡೆಸಲಾಯಿತು. ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಮತದಾರರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭ ಗ್ರಾಪಂ ಸದಸ್ಯೆ ಭಾಗ್ಯರವಿ, ತಾಪಂ ಮಾಜಿ ಸದಸ್ಯ ಗಣೇಶ್, ದಿಶಾ ಸಮಿತಿ ಸದಸ್ಯ ಆರ್.ಕುಮಾರಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಸಿ.ಸ್ವಾಮಿ, ಗುಜೇಂದ್ರ, ಎಸ್.ಟಿ.ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್.ಪ್ರಭಾಕರ್, ಗ್ರಾಮಸ್ಥರಾದ ಶೇಖರ್, ರಾಧಾಕೃಷ್ಣ, ರೇವೇಗೌಡ, ಸಣ್ಣಪ್ಪ, ಗಣೇಶ್, ಕೃಷ್ಣಕಾಂತ್, ಜಗದೀಶ್, ಅಕ್ಷಯ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!