ಕಾರ್ಯಕ್ರಮ

ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ

ಕುಶಾಲನಗರ, ಫೆ 05: ಕುಶಾಲನಗರದ ದಂಡಿನಪೇಟೆಯ ಮದರಸ ಅರೇಬಿಯ ನೂರುಲ್ ಇಸ್ಲಾಂ ಆಶ್ರಯದಲ್ಲಿ ಮದರಸ ಆವರಣದಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ದಂತ ಪರೀಕ್ಷೆ ಶಿಬಿರ ನಡೆಯಿತು.
ಮೈಸೂರಿನ ದಂತ ವೈದ್ಯ ಡಾ.ಶೌಕತ್ ಅಲಿ‌ಖಾನ್ ಶಿಬಿರ ಉದ್ಘಾಟಿಸಿದರು.
ಮದರಸ ಸಮಿತಿ ಅಧ್ಯಕ್ಷ ಶಬ್ಬೀರ್ ಬಾಷಾ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ 220 ಮಕ್ಕಳಿಗೆ ತಪಾಸಣೆ ನಡೆಸಲಾಯಿತು.
ಕೊಪ್ಪ ಗ್ರಾಮದ‌ ಮಕ್ಕಳ ತಜ್ಞ ಡಾ. ರಾಮಚಂದ್ರ, ಡಾ.ಸಾಜಿಯ ನಿಜಾಂ, ಡಾ.ಜಹಾರ ಶರೀಫ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ಶ್ವೇತಾ, ದೀಪಾ, ಮಮತಾ ತಪಾಸಣೆ ನಡೆಸಿದರು.
ಈ ಸಂದರ್ಭ ಜಾಮಿಯ ಮಸೀದಿ ಅಧ್ಯಕ್ಷ ಮುಜೀಬುರ್ ರೆಹಮಾನ್, ಉದ್ಯಮಿ ಅಮ್ಜದ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!