ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ, ಕುಶಾಲನಗರಕ್ಕೆ 200 ಕೋಟಿ: ಅಭಿವೃದ್ದಿ ಪರ ಬಿಜೆಪಿ: ರಂಜನ್
ಕುಶಾಲನಗರ, ಫೆ 02: ಬಿಜೆಪಿ ಸರಕಾರ ಅಭಿವೃದ್ಧಿ ಪರ ಸರಕಾರವಾಗಿದ್ದು ಮಡಿಕೇರಿ ಕ್ಷೇತ್ರಕ್ಕೆ 1800 ಕೋಟಿ ಹಾಗೂ ಕುಶಾಲನಗರ ಕ್ಕೆ 200 ಕೋಟಿ ಅನುದಾನ ಇದುವರೆಗೆ ಒದಗಿಸಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಹೇಳಿದರು.
ಕುಶಾಲನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ರಂಜನ್, ಅನುದಾನ ವಿವರಗಳು, ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರ ನೀಡಿದರು.
ಚರಿತ್ರೆಯಲ್ಲಿ ದಾಖಲೆ ಎನ್ನುವಂತೆ 138 ಕೋಟಿ ರೂಗಳ ಪರಿಹಾರ ಧನ ವಿತರಿಸಲಾಯಿತು. ಕುಶಾಲನಗರ ಪಪಂ ವ್ಯಾಪ್ತಿಯಲ್ಲಿ ವಿವಿಧ ಹಾಸ್ಟೆಲ್ ಗಳು, ನಗರೋತ್ಹಾನ ಯೋಜನೆಗಳ ಕಾಮಗಾರಿಗಳು, ವಸತಿ ಯೋಜನೆ, ತಾಪಂ ಸಂಕೀರ್ಣ ಸೇರಿದಂತೆ 200 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಕೈಗೊಂಡ ಕಾಮಗಾರಿ, ಅಭಿವೃದ್ಧಿ ಯೋಜನೆಗಳ ವಿವರ ಒಳಗೊಂಡ ಕೈಪಿಡಿಯನ್ನು ಶಾಸಕರು ಬಿಡುಗಡೆಗೊಳಿಸಿದರು.
ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಕುಶಾಲನಗರ ಶಿಕ್ಷಣ ಕೇಂದ್ರಗಳಿಗೆ ಹೆಸರುವಾಸಿ. ಖಾಸಗಿ ಶಾಲಾ ಕಾಲೇಜುಗಳಿಗೆ ಸರಿಸಾಟಿಯಾಗಿ ಸರಕಾರಿ ಶಾಲಾ ಕಾಲೇಜುಗಳನ್ನು ಅಭಿವೃಪಡಿಸುವಲ್ಲು ಶಾಸಕರು ಮಹತ್ತರ ಪಾತ್ರ ವಹಿಸಿದ್ದಾರೆ. ಕೊಡಗಿಗೆ ಪ್ರತ್ಯೇಕ ವಿವಿ ಲಭಿಸಲು ಕಾರಣೀಭೂತರಾಗಿದ್ದಾರೆ.
ನೆರೆ ಸಮಸ್ಯೆ ಹೂಳೆತ್ತುವ ಯೋಜನೆ, ಆರೋಗ್ಯಕ್ಕೆ ಸುಸಜ್ಜಿತ ಐಸಿಯು ಘಟಕಗಳ ಕೊಡುಗೆ, ಪುರಸಭೆಗೆ ಸುಸಜ್ಜಿತ ಸಂಕೀರ್ಣ ಅನುಮೋದನೆ ಸೇರಿದಂತೆ ಮರಣ ನಿಧಿ ಏರಿಕೆ, ಶ್ರದ್ಧಾಂಜಲಿ ವಾಹನ ಖರೀದಿ ಮತ್ತಿತರ ಯೋಜನೆಗಳು ಕುಶಾಲನಗರಕ್ಕೆ ಒದಗಿಸುವಲ್ಲಿ ಶಾಸಕರ ಪ್ರಯತ್ನ ಶ್ಲಾಘನೀಯ ಎಂದರು.
ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖರಾದ ಉಮಾಶಂಕರ್, ಶಿವಾಜಿ, ಪುರಸಭೆ ಸದಸ್ಯ ಅಮೃತ್ ರಾಜ್, ಕೆ.ಜಿ.ಮನು, ಪ್ರಮುಖರಾದ ಕುಮಾರಪ್ಪ, ವೈಶಾಖ್, ಪ್ರವೀಣ್, ಚಂದ್ರಶೇಖರ್ ಹೆರೂರು, ಸುಮನ್, ಪ್ರಥ್ವಿ ಮತ್ತಿತರರು ಇದ್ದರು.