ಪ್ರಕಟಣೆ

ಸಂಭಾವ್ಯ ಗೆಲುವು ತಪ್ಪಿಸಲು ಷಡ್ಯಂತ್ರ: ನಾಪಂಡಮುತ್ತಪ್ಪ, ನೋಟಿಸ್ ಗೆ ಪ್ರತಿಕ್ರಿಯೆ

ಜೆಡಿಎಸ್ ವರಿಷ್ಠರ ಆಶೀರ್ವಾದ ನನ್ನ ಮೇಲಿದೆ: ಚುನಾವಣೆಗೆ ತಯಾರಿ‌ ನಡೆಸಲು ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ಪ್ರತಿಕ್ರಿಯೆ

ಕುಶಾಲನಗರ, ಜ 23: ದಿನಾಂಕ 21-01-2023ರಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ರವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೆಂದು ಬಿಂಬಿಸಿಕೊಳ್ಳುತ್ತಿರುವ ಕುರಿತು ನೋಟೀಸ್ ನೀಡಿದ ಬಗ್ಗೆ ನಾಪಂಡ ಮುತ್ತಪ್ಪ ಪ್ರತಿಕ್ರಿಯೆ ನೀಡಿದ್ದು, ಕೆಲ ತಿಂಗಳುಗಳ ಹಿಂದೆ ಮಾನ್ಯ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮುಖದಲ್ಲಿ ಕಾಂಗ್ರೇಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, ಸೇರ್ಪಡೆಯ ಸಂಧರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾಗ ಮಾನ್ಯ ಕುಮಾರಸ್ವಾಮಿಯವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆಗಳು ನಡೆದ ನಂತರ ಮಾನ್ಯ ಕುಮಾರಸ್ವಾಮಿಯವರು ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ. ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗದಿದ್ದರೂ ಮೌಖಿಕವಾಗಿ ಚುನಾವಣೆಗೆ ಸಿದ್ದರಾಗುವಂತೆ ಸೂಚಿಸಿದ್ದಾರೆ. ತದ ನಂತರ ನನ್ನ ವ್ಯಕ್ತಿ ಪರಿಚಯದ “ಕೊಡಗಿನ ಭರವಸೆಯ ಬೆಳಕು-ನಾಪಂಡ ಮುತ್ತಪ್ಪ 2023 ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಮೆಚ್ಚಿದ ಅಭ್ಯರ್ಥಿ” ಎನ್ನುವ ಪುಸ್ತಕವನ್ನು ಹೊರತಂದಾಗ ಜೆಡಿಎಸ್ ವರಿಷ್ಠರಾದ ಶ್ರೀ ಎಚ್ ಡಿ ದೇವೇಗೌಡರೆ ಖುದ್ದಾಗಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. 13-01-2023ರಂದು ಪವರ್ ಟಿವಿ ನಡೆಸಿದ ಮತ ಸಮೀಕ್ಷೆಯಲ್ಲಿ ನನಗೆ ಕ್ಷೇತ್ರದಾಧ್ಯಂತ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದನ್ನು ಗಮನಿಸಿ ಮತಿ ಭ್ರಮಣೆಗೊಳಗಾಗಿರುವ ಕೆಲವರು ಅವ್ಯಾಹತವಾಗಿ ನನ್ನ ವಿರುದ್ದ ಷಡ್ಯಂತ್ರವನ್ನು ರೂಪಿಸುತ್ತಿದ್ದು, ಇದರ ಭಾಗವಾಗಿ ಈ ಮೇಲೆ ಉಲ್ಲೇಖಿಸಿದ ನೋಟೀಸನ್ನು ಜಾರಿಗೊಳಿಸಿದ್ದಾರೆ. ಅಷ್ಟಕ್ಕೂ ಈ ರೀತಿಯ ನೋಟೀಸನ್ನು ಜಾರಿಗೊಳಿಸುವ ಅಧಿಕಾರ ಜಿಲ್ಲಾಧ್ಯಕ್ಷರ ವ್ಯಾಪ್ತಿಯನ್ನು ಮೀರಿದ್ದಾಗಿದ್ದು ಅಂತಹ ಅಧಿಕಾರ ರಾಜ್ಯ ಸಮಿತಿಗೆ ಮಾತ್ರವಿದೆ. ಈ ನೋಟೀಸನ್ನು ಜಾರಿಗೊಳಿಸುವ ಮುಖಾಂತರ ಯುಧ್ದೊಪಾದಿಯಲ್ಲಿ ನಡೆಯುತ್ತಿರುವ ಪಕ್ಷ ಸಂಘಟನೆಯ ಕೆಲಸಕ್ಕೆ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷದ ವರಿಷ್ಠರಿಗೆ ಸೂಕ್ತ ಸಂಧರ್ಭದಲ್ಲಿ ಸಮಜಾಯಿಸಿ ನೀಡಲು ಬದ್ದನಾಗಿದ್ದು, ನಾನೇ ಪಕ್ಷದ ಸೂಕ್ತ ಸಂಭವನೀಯ ಅಭ್ಯರ್ಥಿಯಾಗಿದ್ದು, ಈ ಭಾರಿ ಮಡಿಕೇರಿಯಲ್ಲಿ ಜೆಡಿಎಸ್ ಜಯಭೇರಿ ಭಾರಿಸುವುದು ಖಚಿತ ಎಂದು ನಾಪಂಡ ಎಂ ಮುತ್ತಪ್ಪ ಈ ಮೂಲಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!