ಕ್ರೈಂ
ಮುತ್ತೂಟ್ ಫೈನಾನ್ಸ್ ಮಾಜಿ ವ್ಯವಸ್ಥಾಪಕ ಸತೀಶ್ ನೇಣಿಗೆ ಶರಣು
ಕುಶಾಲನಗರ ಜ:೨೪: ಸಾಲ ಬಾದೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತೂಟ್ ಫೈನಾನ್ಸ್ ನಾಪೊಕ್ಲು ಶಾಖೆ ಮಾಜಿ ವ್ಯವಸ್ಥಾಪಕ ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಹೆಗ್ಗಳ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದ ನಿವಾಸಿ ಪಿ.ಕೆ. ನಾಣಿಯಪ್ಪ ಅವರ ಪುತ್ರ ಮತ್ತು ಮುತ್ತೂಟ್ ಫೈನಾನ್ಸ್ ನಾಪೊಕ್ಲು ಶಾಖೆಯ ಮಾಜಿ ವ್ಯವಸ್ಥಾಪಕರಾಗಿದ್ದ ಪಿ.ಎನ್.ಸತೀಶ್ (47) ಮೃತ ವ್ಯಕ್ತಿ.
ಸತೀಶ್ ವಿರಾಜಪೇಟೆ ಗೌರಿಕೆರೆಯ ಬಳಿ ಮನೆಯ ಹಿಂಬದಿಯ ಸ್ಟೋರ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಮೃತನ ತಂದೆ ನಾಣಿಯಪ್ಪ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.