ಕಾರ್ಯಕ್ರಮ
ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ ಮದ್ಯ ನಾಶ
ಕುಶಾಲನಗರ, ಜ 19:ಕುಶಾಲನಗರ ಸಮೀಪದ ಸುಂದರ ನಗರದ ಕೈಗಾರಿಕಾ ಬಡಾವಣೆಯಲ್ಲಿ ರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದ ಗೋದಾಮಿನಲ್ಲಿ ಮಾರಾಟವಾಗದ ಅವಧಿ ಮೀರಿ ಉಳಿದ, ಮಾನವ ಸೇವನೆಗೆ ಯೋಗ್ಯ ವಲ್ಲದ ಮದ್ಯವನ್ನು ಬುಧವಾರ ನಾಶ ಪಡಿಸಲಾಯಿತು.
ಅಬಕಾರಿ ಇಲಾಖೆಯ ಸೋಮವಾರಪೇಟೆ ತಾಲ್ಲೂಕು ಉಪ ಅಧೀಕ್ಷಕಿ ಆರ್.ಎಂ. ಚೈತ್ರಾ ನೇತೃತ್ವದಲ್ಲಿ ರೂ.4.33 ಲಕ್ಷ ರೂ. ಮೌಲ್ಯದ ಅವಧಿ ಮೀರಿದ 237 ಬಾಕ್ಸ್ ವಿವಿಧ ಕಂಪನಿಯ ಬಿಯರ್ ಅನ್ನು ಹಾಗೂ 103 ಬಿಡಿ ಬಾಟಲ್ ಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಗುಂಡಿಗೆ ಸುರಿದು ನಾಶಪಡಿಸಲಾಯಿತು.
ಈ ಸಂದರ್ಭ ಕೆ.ಎಸ್.ಬಿ.ಸಿ.ಎಲ್ ಘಟಕದ ವ್ಯವಸ್ಥಾಪಕ ಜಿ.ಎಂ.ಮಹಾದೇವಯ್ಯ, ಘಟಕದ ಮೇಲುಸ್ತುವಾರಿ ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಬಿ.ಎಸ್.ಲೋಕೇಶ್,ಅಬಕಾರಿ ಸಿಬ್ಬಂದಿಗಳಾದ ನಾಗರಾಜು,ರಶ್ಮಿ ,ಪೊಲೀಸ್ ಇಲಾಖೆಯ ಎಎಸ್ಐ ಕುಮಾರಿ ಸೇರಿದಂತೆ ಅಬಕಾರಿ ಸಿಬ್ಬಂದಿಗಳು,ಪೋಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.