ಕುಶಾಲನಗರ, ಜ 19:
ಕೊಡಗಿನ ಹೆಬ್ಬಾಗಿಲು ಕುಶಾಲನಗರ ಹೊರ ಜಿಲ್ಲೆಯಿಂದ ಪ್ರವೇಶಿಸುತ್ತಿದ್ದಂತೆ ಸ್ವಾಗತ ಕೋರುವ ಕಮಾನು ಭಾಗಶಃ ಮರ ಗಿಡಗಳಿಂದ ಮುಚ್ಚಿ ಹೋಗಿರುತ್ತದೆ. ಪಕ್ಕದಲ್ಲೆ ಇರುವ ಹೈ ಮಾಸ್ಟ್ ಲ್ಯಾಂಪ್ ಕೆಟ್ಟು ಹಲವಾರು ಸಮಯವೇ ಆಗಿಹೋಗಿದೆ. ಈ ಕಂಬದಿಂದ ವಿದ್ಯುತ್ ಸೋರಿಕೆಯಾಗಿ ಶಾಕ್ ಹೊಡೆಯುತ್ತಿತ್ತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೇಳುತ್ತಾರೆ. ಏನಾದರೂ ದುರ್ಘಟನೆ ಸಂಭವಿಸುವ ಮುನ್ನ ಎಚ್ಚೆತ್ತು ಕೊಳ್ಳಬೇಕಾಗುತ್ತದೆ. ಇದನ್ನು ದುರಸ್ತಿ ಮಾಡುವುದು ಬಿಟ್ಟು ವಿದ್ಯುತ್ ಸಂಪರ್ಕವನ್ನೇ ತೆಗೆದು ಬಿಟ್ಟಿರುತ್ತಾರೆ. ಸ್ವಾಗತ ಕಮಾನಿನ ಕಂಬವಂತು ತುಕ್ಕು ಹಿಡಿಯುವ ಪರಿಸ್ಥಿತಿಯಲ್ಲಿದೆ. ಆದಷ್ಟು ಬೇಗ ಇಲ್ಲಿ ಬೆಳೆದಿರುವ ಕಾಡುಗಳನ್ನು ಕಡಿದು ಹೈ ಮಾಸ್ಟ್ ಲೈಟನ್ನು ಸರಿಪಡಿಸಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರವೇಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆಯ ಮೂಲಕ ಈ ಕೆಲಸವನ್ನು ಮಾಡಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಪೂಜಾರಿಯವರು ಆಗ್ರಹಿಸಿದ್ದಾರೆ .
Back to top button
error: Content is protected !!