ಕಾರ್ಯಕ್ರಮಸಾಹಿತ್ಯ

ಕುಶಾಲನಗರ ಸಾಹಿತ್ಯ ಸಮ್ಮೇಳನ ಕಛೇರಿ ಉದ್ಘಾಟಿಸಿದ ತಹಸೀಲ್ದಾರ್ ಟಿ.ಎಂ.ಪ್ರಕಾಶ್

ಕುಶಾಲನಗರ, ಜ 15:
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ 3 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ ಸಂಘಟಿಸುವ ದಿಸೆಯಿಂದ ನಗರದ ಸೋಮೇಶ್ವರ ದೇವಾಲಯದ ಬಳಿಯ ಚಂದ್ರಶೀ ವಾಣಿಜ್ಯ ಸಂಕೀರ್ಣದಲ್ಲಿ ತೆರೆದ ಸಾಹಿತ್ಯ ಸಮ್ಮೇಳನ ಕಛೇರಿಯನ್ನು ಕುಶಾಲನಗರ ತಾಲ್ಲೂಕಿನ‌ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೊಸ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ಹಾಗು ಅರ್ಥವತ್ತಾಗಿ ನಡೆಯುವ ಸಂಬಂಧ ತಾಲ್ಲೂಕು‌ ಆಡಳಿತ ದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಹಾಗೆಯೇ ಸಾಹಿತ್ಯ ಪರಿಷತ್ತು ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳಾವಕಾಶವನ್ನು ಗುರುತಿಸಿ ಕೊಡುವುದಾಗಿ ತಹಸೀಲ್ದಾರ್ ಪ್ರಕಾಶ್ ಘೋಷಿಸಿದರು.
ಮುಖ್ಯ ಅತಿಥಿಗಳಾಗಿದ್ದ ಪೋಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರ್ ಮಾತನಾಡಿ, ಸಾಹಿತ್ಯ ಪರಿಷತ್ತು ಹಾಗು ವರ್ಷಕ್ಕೊಮ್ಮೆ ಜರುಗುವ ಸಾಹಿತ್ಯ ಸಮ್ಮೇಳನಗಳು ಕನ್ನಡಿಗರ ಅಸ್ಮಿತೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮನಸುಗಳು ಸಮ್ಮೇಳನಕ್ಕೆ ಆಗಮಿಸಬೇಕು. ಹಾಗೆಯೇ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಸಾಹಿತ್ಯ ಪರಿಷತ್ತಿನ
ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕುಶಾಲನಗರದಲ್ಲಿ ಜರುಗುತ್ತಿರುವ ಸಮ್ಮೇಳನವನ್ನು ತಾಲ್ಲೂಕಿನ ಮಹಾ ಜನತೆ ಮನೆ ಮನೆಯ ಹಬ್ಬದೋಪಾದಿಯಲ್ಲಿ ಸಂಭ್ರಮಿಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಸಾಪ ನಿರ್ದೇಶಕ ಎಂ.ಇ.ಮೊಹಿದ್ದೀನ್, ಟಿ.ಜಿ.ಪ್ರೇಮಕುಮಾರ್, ಮೆ.ನಾ.ವೆಂಕಟನಾಯಕ್, ಫ್ಯಾನ್ಸಿ ಮುತ್ತಣ್ಣ, ವಿ.ಟಿ.ಮಂಜುನಾಥ್, ದೇವರಾಜು, ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಪ್ರೊ.ಹೆಚ್.ಬಿ‌.ಲಿಂಗಮೂರ್ತಿ, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಸಮ್ನೇಳನದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ವೆಂಕಟೇಶ ಪೂಜಾರಿ, ಎಂ.ಕೃಷ್ಣ, ಎಂ.ಡಿ.ರಂಗಸ್ವಾಮಿ, ಎಂ.ಎನ್.ಚಂದ್ರಮೋಹನ್,ಬಿ.ಎ.ನಾಗೇಗೌಡ, ಹೆಚ್.ಎಂ.ರಘು ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!