ಕುಶಾಲನಗರ, ಜ 01: ಬಡ ಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯವು ದೇವರು ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ ಎಂದು ಪಾಣಕ್ಕಾಡಿನ ಸಯ್ಯದ್ ಜ಼ೈನುಲ್ ಆಬಿದಿನ್ ತಂಜ್ಞಳ್ ಹೇಳಿದರು.
ಕುಶಾಲನಗರದ ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ಶಾದಿಮಹಲ್ ನಲ್ಲಿ ಹಮ್ಮಿಕೊಂಡಿದ್ದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಬಡ ಹೆಣ್ಣು ಮಕ್ಕಳ ಜೀವನದ ಬಾಗಿಲನ್ನು ತೆರೆಯುವ ಕೆಲಸ ಅಲ್ ಇಹ್ಸಾನ್ ಅಸೋಸಿಯೇಷನ್ ನವರು ಮಾಡಿದ್ದಾರೆ. ಈ ಪುಣ್ಯದ ಕೆಲಸಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಹಾಗೂ ಅಸೋಸಿಯೇಶನ್ ನ ಈ ಸತ್ಕಾರ್ಯವನ್ನು ದೇವರು ಸ್ವೀಕರಿಸಲಿ. ಮುಂದೆಯೂ ಇನ್ನಷ್ಟು ಸತ್ಕಾರ್ಯಗಳಿಗೆ ಈ ಸಂಘ ಸಾಕ್ಷಿಯಾಗಲಿ ಎಂದರು.
ಕಾರ್ಯಕ್ರಮದ ಉದ್ಘಾಟಕರಾದ ಕುಶಾಲನಗರದ ಹಿಲಾಲ್ ಮಸೀದಿಯ ಧರ್ಮಗುರು ಜನಾಬ್ ಸೂಫಿದಾರಿಮಿ ಮಾತನಾಡಿ, ನವಜೋಡಿಗಳಿಗೆ ಮುಂದಿನ ದಾಂಪತ್ಯ ಜೀವನದ ಬಗ್ಗೆ ವಿವರಣೆ ನೀಡಿದರು.
ಕುಶಾಲನಗರ ಪುರಸಭೆ ಅಧ್ಯಕ್ಷ ಜೈವರ್ಧನ್ ಮಾತನಾಡಿ, ಸತತ ೧೩ ವರ್ಷಗಳಿಂದ ಬಡಕುಟುಂಬದ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಅಲ್ ಇಹ್ಸಾನ್ ಅಸೋಸಿಯೇಷನ್ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಅಲ್ಪಸಂಖ್ಯಾತರು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾದ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿ, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಕಾರ್ಯಕ್ರಮಕ್ಕೆ ನಡೆಸಲು ಅಲ್ ಇಹ್ಸಾನ್ ಅಸೋಸಿಯೇಷನ್ ಹಾಗೂ ದಾನಿಗಳಿಗೆ ಧನ್ಯವಾದಗಳನ್ನು ತಿಳಿಸಿ, ಇಸ್ಲಾಂ ಧರ್ಮದಲ್ಲಿ ಹೆಣ್ಣುಮಕ್ಕಳ ಮಹತ್ವದ ಬಗ್ಗೆ ವಿವರಿಸಿದರು.
ಕುಶಾಲನಗರದ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಹುಸೇನ್ ಹಾಗೂ ಜಾಮಿಯಾ ಮಸೀದಿ ಅಧ್ಯಕ್ಷ ಮುಜೀಬುರ್ರಹಮಾನ್ ಮಾತನಾಡಿ, ಅಲ್ ಇಹ್ಸಾನ್ ಅಸೋಸಿಯೇಷನ್ ವತಿಯಿಂದ ನಡೆಸಿದ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬಡವರ ವಿದ್ಯಾಭ್ಯಾಸ, ಆರೋಗ್ಯ ಹೀಗೆ ಇನ್ನಷ್ಟು ಸರ್ಕಾರ್ಯಗಳು ಸಂಘದಿಂದ ಆಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾದ ಉದ್ಯಮಿ ಶಾಹಿರ್ ಹಾಜಿ ಮಾತನಾಡಿ, ಸಮುದಾಯದವರಿಗೆ ಆರ್ಥಿಕವಾಗಿ ಸಹಕಾರ ನೀಡುವ ಉದ್ದೇಶದಿಂದ ಬಡ್ಡಿರಹಿತ ಸಹಕಾರ ಸಂಘವನ್ನು ಸ್ಥಾಪಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಹಿಲಾಲ್ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಗೂ ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ,
ಕುಶಾಲನಗರ ಪುರಸಭೆ ಸದಸ್ಯ ಖಲೀಮುಲ್ಲಾ,
ಪ್ರಮುಖರಾದ ಸಿ.ಎಂ.ಹಮೀದ್ ಉಸ್ತಾದ್ ಹಾಗೂ ಇಕ್ಬಾಲ್ ಮುಸ್ಲಿಯಾರ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಪಾಣಕ್ಕಾಡ್ ಸಯ್ಯದ್ ಜ಼ೈನುಲ್ ಆಬಿದಿನ್ ತಂಜ್ಞಳ್ ಅವರ ನೇತೃತ್ವದಲ್ಲಿ ೪ ನವಜೋಡಿಗಳ ವಿವಾಹ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಇಹ್ಸಾನ್ ಅಸೋಸಿಯೇಷನ್ ಅಧ್ಯಕ್ಷ ಎಂ.ಇ.ಮುಸ್ತಫಾ ವಹಿಸಿದ್ದರು.
ಈ ಸಂದರ್ಭ ಅಲ್ ಇಹ್ಸಾನ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
Back to top button
error: Content is protected !!