ಪ್ರಕಟಣೆ

ಮಾರಿಯಮ್ಮ ದೇವಿಯ ವಿಗ್ರಹ ಧ್ವಂಸ ಪ್ರಕರಣ: ಭಜರಂಗದಳ ಖಂಡನೆ

ಕುಶಾಲನಗರ, ಡಿ‌ 28: ಅತ್ತೂರು ಗ್ರಾಮದ ಸಮಸ್ತ ಹಿಂದೂ ಬಾಂಧವರು ಆರಾಧಿಸುವ ಗ್ರಾಮ ದೇವತೆಯಾದ ಮಾರಮ್ಮ ದೇವಾಲಯದ ಗರ್ಭಗುಡಿಯಲ್ಲಿರುವ ದೇವರ ವಿಗ್ರಹವನ್ನು ಭಗ್ನಗೊಳಿಸಿ ಅದರಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ ಘಟನೆಯನ್ನು‌ ಭಜರಂಗದಳ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ‌ ಖಂಡನೆ ವ್ಯಕ್ತಪಡಿಸಿದ ಭಜರಂಗದಳ ಕೊಡಗು‌ ಜಿಲ್ಲಾ ಸಂಚಾಲಕ ಅನೀಶ್,
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ಮಾಡುವಂತ ಕೆಲಸ ಅತಿ ಹೆಚ್ಚಾಗಿ ನಡೆಯುತ್ತಿದ್ದು ಇದಕ್ಕೆ ಪೂರಕ ಎಂಬಂತೆ ಕುಶಾಲನಗರ ತಾಲೂಕಿನ ಅತ್ತೂರು ಗ್ರಾಮದ‌ಲ್ಲಿ ಮಾರಿಯಮ್ಮ ದೇವಿಯ ವಿಗ್ರಹ ಧ್ವಂಸಗೊಳಿಸಿರುವ ಪ್ರಕರಣ ನಿದರ್ಶನವಾಗಿದೆ.
ಈ ರೀತಿಯ ಹೇಯ ಕೃತ್ಯವನ್ನು ಕುಶಾಲನಗರ ಪ್ರಖಂಡ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಅತಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.‌ ಇಲ್ಲದಿದ್ದರೆ ಉಗ್ರ‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು
ಭಜರಂಗದಳ ಪ್ರಮುಖರಾದ
ಶಿವ ಸ್ವಾಮಿ,‌ ಅರುಣ್,ಬಿ.ಎಸ್. ದಿನೇಶ್, ಬಾಲಕೃಷ್ಣ, ವಿನು ಕೆ.ಕೆ. ಅರುಣ್ ಮಾದಪ್ಪ, ಶಶಿ, ಹರ್ಷ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!