ಕುಶಾಲನಗರ, ಡಿ 27: ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಇಲಾಖೆ ವತಿಯಿಂದ
ಕುಶಾಲನಗರ ಹಾಗು ಸೋಮವಾರಪೇಟೆ ತಾಲ್ಲೂಕಿನ ವ್ಯಾಪ್ತಿಯ ಹೋಮ್ ಸ್ಟೇ ಹಾಗೂ ರೆಸಾರ್ಟ್ ಗಳ ಮಾಲೀಕರ ಸಭೆ ಖಾಸಗಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಪ್ರವಾಸೋದ್ಯಮ ಇಲಾಖೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಕೊಠಡಿಗಳ ದರ ಪಟ್ಟಿ ನಮೂದಿಸಿ ಪ್ರವಾಸಿಗರಿಗೆ ಕಾಣುವಂತೆ ಪ್ರದರ್ಶಿಸಬೇಕು.
ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅನೈತಿಕ ಚಟುವಟಿಕೆಗಳಿಂದ ರಕ್ಷಿಸಿ ಎಂದು ಗಂಗಾಧರ್ ಹೇಳಿದರು.
ಈ ಮಧ್ಯೆ ಸಭೆಯಲ್ಲಿ ಮಾತನಾಡಿದ ಕೆಲವು ರೆಸಾರ್ಟ್ ಗಳ ಮಾಲೀಕರು, ಕೋಟ್ಯಾಂತರ ರೂಗಳ ಬಂಡವಾಳ ಹೂಡಿ ಹೋಮ್ ಸ್ಟೇ ಹಾಗು ರೆಸಾರ್ಟ್ ಗಳನ್ನು ತೆರೆದಿದ್ದೇವೆ.
ದಯಮಾಡಿ ರಾತ್ರಿ 12 ಗಂಟೆಯ ವರೆಗೆ ಪೋಲೀಸ್ ಇಲಾಖೆ ಸಮಯ ವನ್ನು ಕೊಡಬೇಕು ಎಂದು ಕೋರಿಕೆಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಗಂಗಾಧರ್, ನಿಯಮಗಳ ಪಾಲನೆಯಷ್ಟೆ ನಮ್ಮ ಕೆಲಸ. ಅನಗತ್ಯವಾಗಿ ಅನೈತಿಕ ಚಟುವಟಿಕೆಗಳ ಬಗ್ಗೆ ದೂರುಗಳು ಬಂದರೆ ಮುಲಾಜಿಲ್ಲದೆ ಕ್ರಮ ವಹಿಸುತ್ತೇವೆ ಎಂದರು.
ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಟೌನ್ ಠಾಣಾಧಿಕಾರಿ ಅಪ್ಪಾಜಿ, ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಭಾರತಿ ಇದ್ದರು.
Back to top button
error: Content is protected !!