ಆರೋಪ

ಬದ್ರುನ್ನಿಸ ಬಡಾವಣೆಯ ಪಾರ್ಕ್ ಜಾಗದಲ್ಲಿ‌ದೆಯೆ ಮೂರು‌ ಮನೆಗಳು?! ಮತ್ತೊಂದು ಗೊಂದಲ

ಕುಶಾಲನಗರ, ಡಿ‌ 19: ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಪಾರ್ಕ್ ಜಾಗವನ್ನು‌ ನಿವೇಶನವನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸೋಮವಾರ ಸರ್ವೆ ಕಾರ್ಯ ನಡೆಯಿತು. ಈ ಮಧ್ಯೆ ಪಾರ್ಕ್ ಜಾಗಕ್ಕೆ ಸ್ಥಳೀಯ ವಾರ್ಡ್ ಸದಸ್ಯ ಪ್ರಮೋದ್‌ ಮುತ್ತಪ್ಪ ಸಮ್ಮುಖದಲ್ಲಿ ಪಾರ್ಕ್ ಜಾಗ ಎಂದು ಸೂಚಿಸುವ‌ ಬೋರ್ಡ್ ಅಳವಡಿಕೆ ಮಾಡಿದ ಬೆನ್ನಲ್ಲೇ ವಿವಾದಿತ ಜಾಗದ ಮಾಲೀಕ ಚರಣ್ ಬೋರ್ಡ್ ಅನ್ನು ಕಿತ್ತೆಸೆದ ಘಟನೆ‌ ಕೂಡ ನಡೆಯಿತು.
ಈ ಬಗ್ಗೆ ಮಾತನಾಡಿದ ಸದಸ್ಯ ಪ್ರಮೋದ್ ಮುತ್ತಪ್ಪ, ಸರ್ವೆ ಕಾರ್ಯ ವರದಿಯನ್ನು‌ ಸಮರ್ಪಕವಾಗಿ ಪರಿಶೀಲಿಸಿ ಪಪಂ ಮೂಲಕ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕಳೆದ ಸಾಮಾನ್ಯ ಸಭೆಯ ನಿರ್ಣಯದಂತೆ ಬೋರ್ಡ್ ಅಳವಡಿಸಲಾಗಿತ್ತು.
ಆದರೆ ಏಕಾಏಕಿ ಬೋರ್ಡ್ ಕಿತ್ತೆಸೆದಿರುವುದು ಖಂಡನೀಯ. ಸರ್ವೆ ಹಾಗೂ ಪರಿಶೀಲನೆ ಬಳಿಕ‌ ಸಂಬಂಧಿಸಿದವರು ಬೋರ್ಡ್ ತೆರವುಗೊಳಿಸುತ್ತಿದ್ದರು ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ
ಕೂಡ ಅಧ್ಯಕ್ಷರೂ ಆದ ನಿವೇಶನ ಮಾಲೀಕ ಎಂ.ಎಂ.ಚರಣ್, ಸರ್ವೆ ನಂ 211/6 ರ 11 ಸೆಂಟ್ ಜಾಗವನ್ನು ತಾನು ಖರೀದಿ‌ ಮಾಡಿದ್ದು ಇದು ಯಾವುದೇ ರೀತಿಯಲ್ಲೂ ಪಾರ್ಕ್ ಜಾಗ ಅಲ್ಲ. ಇದಕ್ಕೆ ಸಮರ್ಪಕವಾಗಿ ದಾಖಲಾತಿಗಳನ್ನು ತಾನು ಹೊಂದಿದ್ದೇನೆ. ಇಂದು ನಡೆದ ಸರ್ವೆ ಸಂದರ್ಭ ವಿವಾದಕ್ಕೆ‌ ಒಳಪಡಿಸಿರುವ 38, 39 ಸಂಖ್ಯೆಯ ನಿವೇಶನಗಳು‌ ಪಾರ್ಕ್ ಜಾಗದಲ್ಲಿಲ್ಲ ಎಂಬುದು ತೋರಿಸುತ್ತಿದೆ ಎಂದರು.
ಪಂಚಾಯ್ತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳ ಗಮನಕ್ಕೆ ತರದೆ ಕೆಲವು ಅವರಾಗಿಯೇ ನನ್ನ ಜಾಗಕ್ಕೆ‌ ಪಾರ್ಕ್ ಜಾಗವೆಂದು ಬೋರ್ಡ್ ಅಳವಡಿಸಿದ ಕಾರಣ ತೆರವುಗೊಳಿಸಿದ್ದೇನೆ.‌ ಈ ಬೋರ್ಡ್ ಅಳವಡಿಸಿರುವವರ ಮೇಲೆ ಪಪಂ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ.
ವಿರೋಧ ಪಕ್ಷದವರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳದಲ್ಲಿದ್ದ ಪಪಂ ಸದಸ್ಯ ಅಮೃತ್‌ರಾಜ್ ಮಾತನಾಡಿ, ಫೇಕ್ ದಾಖಲೆಗಳಂತೆ ಇದೀಗ ಬೋರ್ಡ್ ಒಂದನ್ನು ಕೂಡ ಪುರಸಭೆ ಹೆಸರಿನಲ್ಲಿ ಅಳವಡಿಸಿದ್ದು, ವಿಚಾರಿಸಲಾಗಿದೆ ಪಂಚಾಯ್ತಿ ವತಿಯಿಂದ ಈ‌ ಬೋರ್ಡ್ ಅಳವಡಿಕೆ ಮಾಡಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು. ಪಾರ್ಕ್ ಎನ್ನುತ್ತಿರುವ ಜಾಗದಲ್ಲಿ‌ ಸರ್ವೆ ಸಂದರ್ಭ ಮೂರು‌ ಮನೆಗಳು‌ ನಿರ್ಮಾಣವಾಗಿರುವುದು ಗೋಚರಿಸಿದೆ ಎಂದರು.
ಬದ್ರುನ್ನಿಸ ಬಡಾವಣೆ ಪಕ್ಕದ ನಾಗಪ್ಪಶೆಟ್ಟಿ ಬಡಾವಣೆ ‌ಮಾಲೀಕ ಆದರ್ಶ್ ಮಾತನಾಡಿ, ವಿವಾದ ಇರುವುದು ಬದ್ರುನ್ನಿಸಾ ಬಡಾವಣೆಯಲ್ಲಿ ಆದರೆ ಸರ್ವೆ‌ ಮಾಡಿರುವುದು‌ ನಾಗಪ್ಪಶೆಟ್ಟಿ ಬಡಾವಣೆಯಲ್ಲಿ.
ಇಡೀ ಬದ್ರಿನ್ನಿಸ ಬಡಾವಣೆಯನ್ನು ಸಂಪೂರ್ಣ ಸರ್ವೆ ಮಾಡಿದಾಗ ಮಾತ್ರ ಸತ್ಯ ತಿಳಿಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಮತ್ತೆ ಜಂಟಿ ಸರ್ವೆ‌ ಕಾರ್ಯ ನಡೆಯಲಿದ್ದು ವಿವಾದ ಅಂತ್ಯ ಕಾಣಲಿದೆಯೇ ಕಾದು‌ ನೋಡಬೇಕು.
ಈ ಸಂದರ್ಭ ಪಪಂ ಸದಸ್ಯ ಸುರೇಶ್, ವಿ.ಎಸ್.ಆನಂದಕುಮಾರ್, ಮಾಜಿ ಸದಸ್ಯ ಶಿವಶಂಕರ್, ಕುಡಾ ಸದಸ್ಯ ವೈಶಾಖ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!