ಆರೋಪ

ಬದ್ರುನ್ನಿಸ ಪಾರ್ಕ್ ಅಕ್ರಮದಲ್ಲಿ ಸತ್ತಿರುವವರ ಹೆಸರಿನಲ್ಲಿ ಷಡ್ಯಂತ್ರ ಆರೋಪ: ಜಿಲ್ಲಾಧಿಕಾರಿ ಗಮನಹರಿಸಲು ಆಗ್ರಹ

ಕುಶಾಲನಗರ, ಡಿ 15:ಕುಶಾಲನಗರದ ಬದ್ರುನ್ನಿಸ ಬಡಾವಣೆಯಲ್ಲಿ ಕುಡ ಅಧ್ಯಕ್ಷ ಬಿಜೆಪಿಯ ಚರಣ್ ಎಂಬವರು ಅಕ್ರಮವಾಗಿ 20 ಸೆಂಟ್ ಪಾರ್ಕ್ ಜಾಗ ಖರೀದಿಸಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಬಿಜೆಪಿಗರ ಅಕ್ರಮ ಕೂಟವೊಂದು ಭೂ‌ಕಬಳಿಕೆ ದಂಧೆಯಲ್ಲು ತೊಡಗಿದೆ. ಅಕ್ರಮವನ್ನು ತಡೆಯಬೇಕಾದ ಆಡಳಿತ ಪಕ್ಷ ಬಿಜೆಪಿ ಜಾಣಮೌನ ವಹಿಸಿದೆ. ಭೂಕಬಳಿಕೆದಾರ ರಿಯಲ್ ಎಸ್ಟೇಟ್ ಮಾಫಿಯಗಳ‌ ಕೈಗೆ ಬಿಜೆಪಿ ಅಧಿಕಾರಿ ನೀಡಿದೆ. ಮಾಜಿ‌ ಕುಡ ಅಧ್ಯಕ್ಷ ನರಸಿಂಹಮೂರ್ತಿ, ಅಧಿಕಾರಿ ರಾಜಶೇಖರ್ ಮೃತರಾಗಿದ್ದು ಅವರ ಹೆಸರು ಬಳಸಿಕೊಂಡು ಷಡ್ಯಂತ್ರ ರೂಪಿಸಲಾಗಿದೆ.

ಪಾರ್ಕ್ ಜಾಗ ಮತ್ತೊಂದು‌ ಬಡಾವಣೆಗೆ ವರ್ಗಾಯಿಸಲಾಗಿದೆ ಎಂಬ ಹೇಳಿಕೆ ಬಾಲಿಶವಾದದ್ದು. ಅಕ್ರಮ ಪ್ರಶ್ನಿಸಬೇಕಾದ ಚುನಾಯಿತ ಜನಪ್ರತಿನಿಧಿ ಅಮೃತ್‌ರಾಜ್ ಜಾತಿ ಹೆಸರಿನಲ್ಲಿ ಅಕ್ರಮಕ್ಕೆ ಪರೋಕ್ಷವಾಗಿ ಶ್ರೀರಕ್ಷೆ ನೀಡುವ ಹುನ್ನಾರ ನಡೆಸಿದ್ದಾರೆ ಎಂದು ಶಶಿಧರ್ ಆರೋಪಿಸಿದರು. ಜಾತಿ ಹೆಸರಿನಲ್ಲಿ ರಾಜಕಾರಣ‌ ಮಾಡುತ್ತಿರುವ ಅಮೃತ್‌ರಾಜ್ ತಮ್ಮ ಜವಾಬ್ದಾರಿಯುತ ಸ್ಥಾನಕ್ಕೆ ರಾಜೀನಾಮೆ‌ ನೀಡುವಂತೆ ಒತ್ತಾಯಿಸಿದರು. ಚರಣ್ ಅಚರಿಗೆ ಪಾರ್ಕ್ ಜಾಗ ಖಾತೆ ಮಾಡಿಕೊಟ್ಟ ಪಪಂ ಸಿಬ್ಬಂದಿ ರಾಘವ ಅವರನ್ನು ಅಮಾನತ್ತು‌ ಮಾಡಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಆಸ್ತಿಪಾಸ್ತಿ ಸಂರಕ್ಷಣೆಗೆ ಪಕ್ಷಾತೀತವಾದ ಸಮಾನ ಮನಸ್ಕರು ಅಗತ್ಯವಿದೆ. ಯಾರೂ ಕೂಡ ಮುಂದೆ ಬರದೆ ಇದ್ದಲ್ಲಿ‌ ಕಾಂಗ್ರೆಸ್ ಹೋರಾಟ ನಡೆಸಲಿದೆ. ಮುಂದಿನ ಒಂದು ವಾರದೊಳಗೆ ಪಾರ್ಕ್ ಜಾಗಕ್ಕೆ ಬೇಲಿ ಮತ್ತು ಬೋರ್ಡ್ ಅಳವಡಿಸಬೇಕು. ಇಲ್ಲದಿದ್ದಲ್ಲಿ‌ ಪಂಚಾಯ್ತಿ ವೈಫಲ್ಯ ಖಂಡಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸುವಂತೆ ಅವರು ಕೋರಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಡ‌ ಮಾಜಿ‌ ಅಧ್ಯಕ್ಷ ಬಿ.ಜಿ.ಮಂಜುನಾಥ್ ಮಾತನಾಡಿ, ಪಾರ್ಕ್ ಜಾಗ ಸಂರಕ್ಷಣೆಗೆ ಕ್ರಮವಹಿಸಲು ಒತ್ತಾಯಿಸಿದರು.

ಪಪಂ ಸದಸ್ಯ ಖಲೀಮುಲ್ಲಾ, ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಅಜಿತ್, ಚಂದ್ರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!