ಕುಶಾಲನಗರ, ಡಿ 11: ಕೂಡಿಗೆ ಸೈನಿಕ ಶಾಲೆಯಲ್ಲಿ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್ ಧ್ವಜದ ನಿಶಾನೆಯನ್ನು ತೋರಿಸುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಬೌದ್ಧಿಕ ವಿಕಸನಕ್ಕೆ ತೋರುವ ಆಸಕ್ತಿಯನ್ನು ತಮ್ಮ ದೈಹಿಕ ಸಾಮರ್ಥ್ಯದ ವೃದ್ಧಿಗೂ ನೀಡಿ, ಉತ್ತಮ ಆರೋಗ್ಯವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು
ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂಬ ಆರು ವಿಭಾಗಗಳಿಗೆ 4 ರಿಂದ 9 ಕಿಮೀ ವರೆಗೆ ಓಟದ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಶಾಲೆಯ 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಎ’ ವಿಭಾಗದಿಂದ ಕೆಡೆಟ್ ದರ್ಶನ್ ಎಂ ಪಿ, ‘ಬಿ’ ವಿಭಾಗದಿಂದ ಕೆಡೆಟ್ ಪ್ರಜ್ವಲ್, ‘ಸಿ’ ವಿಭಾಗದಿಂದ ಕೆಡೆಟ್ ಸೋಹಮ್, ‘ಡಿ’ ವಿಭಾಗದಿಂದ ಕೆಡೆಟ್ ಆರ್ಯನ್ ಮಾರ್ವಕ್ರರ್ ‘ಇ’ ವಿಭಾಗದಿಂದ ಕೆಡೆಟ್ ಮಾನ್ಯ ‘ಎಫ್’ ವಿಭಾಗದಿಂದ ಕೆಡೆಟ್ ಅನ್ವಿ ಹಾಗೂ ‘ಜಿ’ ವಿಭಾಗದಿಂದ ಕೆಡೆಟ್ ದೀಪ್ತಿ ದೇವಿ ಪ್ರಥಮ ಸ್ಥಾನವನ್ನು ಪಡೆದರು. ಒಟ್ಟಾರೆಯಾಗಿ ಶಾಲೆಯ ಸುಬ್ರತೋ ನಿಲಯವು ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಲ್ ಇಂದ್ರನೀಲ್ ಘೋಷ್ ಹಾಗೂ ಸ್ವಾತಿ ಘೋಷ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿದರು.
ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ವೈದ್ಯಾಧಿಕಾರಿ ಸುಜಾತ, ಹಿರಿಯ ಶಿಕ್ಷಕ ಎನ್. ವಿಬಿನ್ ಕುಮಾರ್, ಬೋಧಕ, ಬೋಧಕೇತರ ವರ್ಗ, ಎನ್ ಸಿ ಸಿ ಸಿಬ್ಬಂದಿವರ್ಗ, ಸಾಮಾನ್ಯ ಸಿಬ್ಬಂದಿ ವರ್ಗ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
Back to top button
error: Content is protected !!