ಕಾರ್ಯಕ್ರಮ
ಕೆ ಆರ್ ಇ ಡಿ ಎಲ್ ವತಿಯಿಂದ ಶಕ್ತಿ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ
ಕುಶಾಲನಗರ, ಡಿ.11: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ ಆರ್ ಇ ಡಿ ಎಲ್)
ಕೇಂದ್ರ ಕಛೇರಿಯ ವತಿಯಿಂದ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಉತ್ತರ ಕೊಡಗಿನ ಕೂಡುಮಂಗಳೂರು ( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕದ ಸಂಯುಕ್ತಾಶ್ರಯದಲ್ಲಿ ಹಸಿರು ಇಂಧನ – ಭವಿಷ್ಯದ ಇಂಧನ ಎಂಬ ಕೇಂದ್ರ ವಿಷಯದಡಿ ಏರ್ಪಡಿಸಿದ್ದ ನವೀಕರಿಸಬಹುದಾದ ಶಕ್ತಿ/ ಇಂಧನ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ: 2022
ಹಮ್ಮಿಕೊಳ್ಳಲಾಗಿತ್ತು.
ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಸೀನಪ್ಪ,
ಹಸಿರು ಇಂಧನ
ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು,
ಭವಿಷ್ಯತ್ತಿಗಾಗಿ ನಾವು ಇಂತಹ ಇಂಧನ/ ಶಕ್ತಿ ಮೂಲಗಳನ್ನು ಸಂರಕ್ಷಿಸಲು ಪಣತೊಡಬೇಕು ಎಂದರು.
ಕಡಿಮೆ ಇಂಧನಗಳನ್ನು ಬಳಸುವುದರಿಂದ ಪರಿಸರದಲ್ಲಿ ಉಂಟಾಗುವ ಮಾಲಿನ್ಯ ಕಡಿಮೆ ಮಾಡಬಹುದು”
”ಇಂಧನಗಳ ಸಂರಕ್ಷಣೆ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಇಂತಹ ಕೆಲಸಕ್ಕೆ ವಿದ್ಯಾರ್ಥಿ ಹಾಗೂ
ಯುವ ಸಮುದಾಯ ಮುಂದಾಗಬೇಕು ಎಂದರು.
ನವೀಕರಿಸಬಹುದಾದ ಶಕ್ತಿ ಹಾಗೂ ಇಂಧನ ಸಂರಕ್ಷಣೆ ಕುರಿತು
ಮಾತನಾಡಿದ ಕರ್ನಾಟಕ ನವೀಕರಿಸಬಹುದಾದ ಶಕ್ತಿ ಅಭಿವೃದ್ಧಿ ನಿಯಮಿತ
(ಕೆ.ಆರ್.ಇ.ಡಿ.ಎಲ್)
ದ ಉಪ ಪ್ರಧಾನ ವ್ಯವಸ್ಥಾಪಕ ಸಿ.ಟಿ.ಮಂಜುನಾಥ್,
”ನಾವು ಚಿಕ್ಕವರಿದ್ದಾಗ ಇಂಧನಗಳ ಬಳಕೆ ಮತ್ತು ಅವುಗಳ ಮಹತ್ವದ ಬಗ್ಗೆ ಅರಿವಿರಲಿಲ್ಲ. ಆಗ ಇಷ್ಟೊಂದು ಪ್ರಮಾಣದಲ್ಲಿ ಇಂಧನ ಸಿಗುತ್ತಿರಲಿಲ್ಲ. ಇಂದಿನ ಪೀಳಿಗೆಗೆ ಒಳ್ಳೆಯ ಯೋಜನೆ ಸಿಕ್ಕಿದೆ. ಸೋಲಾರ್, ನೀರು, ಗಾಳಿ ಎಲ್ಲ ಶಕ್ತಿಗಳೂ ದೊರಕಿವೆ ಎಂದರು.
ನಾವು ಸೌರಶಕ್ತಿ, ಪವನ ಶಕ್ತಿ ಮೂಲಗಳಿಂದ ದಕ್ಷ ಶಕ್ತಿ ಮೂಲಗಳನ್ನು ಪಡೆಯುವುದರೊಂದಿಗೆ
ಅವುಗಳನ್ನು ಮಿತವಾಗಿ ಬಳಸಬೇಕು. ಮಿತವಾಗಿ ಬಳಸಿದಲ್ಲಿ ಮುಂದಿನ ಪೀಳಿಗೆಗೂ ಇಂಧನ ಮೂಲಗಳನ್ನು ಉಳಿಸಬಹುದು” ಎಂದು ಹೇಳಿದರು.
ಪ್ರತಿನಿತ್ಯ ನಾವು ಬಳಸುವ ವಿದ್ಯುಚ್ಛಕ್ತಿಯನ್ನೂ ಕೂಡ ಮಿತ ಬಳಕೆ ಮಾಡುವ ಮೂಲಕ ಭವಿಷ್ಯತ್ತಿಗಾಗಿ ಇಂಧನ ಸಂರಕ್ಷಣೆ ಮಾಡಬೇಕು ಎಂದರು.
“ಇಂಧನ ಸಂರಕ್ಷಣೆ” ಕುರಿತು
ಮಾಹಿತಿ ನೀಡಿದ
ಶಾಲಾ ಮುಖ್ಯೋಪಾಧ್ಯಾಯರೂ ಆದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ , ನಾವು
ಕಡಿಮೆ ಇಂಧನಗಳನ್ನು ಬಳಸುವುದರಿಂದ “ಪರಿಸರದಲ್ಲಿ ಉಂಟಾಗುವ ಮಾಲಿನ್ಯ ಕಡಿಮೆ ಮಾಡಬಹುದು”ಎಂದರು.
ನಾವು ಭವಿಷ್ಯದ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಆದ್ಯತೆ ನೀಡಬೇಕಿದೆ.
ವಿದ್ಯಾರ್ಥಿಗಳು ಪೋಷಕರು ಹಾಗೂ ಸ್ನೇಹಿತರಲ್ಲಿ ಇಂಧನದ ಸದ್ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಇದೇ ವೇಳೆ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಇಂಧನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ
ಪ್ರತಿಜ್ಞಾ ವಿಧಿ ಬೋಧಿಸಿದರು.
ಎಂಜಿನಿಯರಿಂಗ್ ಕಾಲೇಜಿನ
ಕಾರ್ಯಕ್ರಮದ ಸಂಯೋಜಕ ಚೂಡಾ ರತ್ನಾಕರ್, ತಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ
ಬಿ.ಡಿ.ರಮ್ಯ,
ಶಿಕ್ಷಕರಾದ ಜಿ.ಗೋಪಾಲಕೃಷ್ಣ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಬಿ.ನಯನ
ಇದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ :
ನಂತರ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್.ಇ.ಡಿ.ಎಲ್. ನ ಡಿ.ಜಿ.ಎಂ., ಸಿ.ಟಿ.ಮಂಜುನಾಥ್ ,
ಇಂಧನ ಸಂರಕ್ಷಣೆ ಕುರಿತು
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಂತರ ಶಾಲೆಯಿಂದ ಕೂಡ್ಲೂರು ಗ್ರಾಮಕ್ಕೆ ತೆರಳಿದ ವಿದ್ಯಾರ್ಥಿಗಳು
ಇಂಧನ ಸಂರಕ್ಷಣೆ ಕುರಿತ
ಘೋಷಣಾ ಫಲಕಗಳನ್ನು ಹಿಡಿದು ಹಸಿರು ಇಂಧನ ಭವಿಷ್ಯದ ಇಂಧನ, ಇಂಧನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಿ ಜನರಲ್ಲಿ ಇಂಧನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.