ಕಾರ್ಯಕ್ರಮ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಕುಶಾಲನಗರದಲ್ಲಿ ‌ಬಿಜೆಪಿ ವಿಜಯೋತ್ಸವ

ಕುಶಾಲನಗರ, ಡಿ 09: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ‌ಬಿಜೆಪಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು.
ಕುಶಾಲನಗರ ಗಣಪತಿ ದೇವಾಲಯದ ಮುಂದೆ ಸಂಭ್ರಮಾಚರಣೆ ಮಾಡಿದ ಬಿಜೆಪಿ‌ ಮುಖಂಡರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಾಸಕ ಅಪ್ಪಚ್ಚುರಂಜನ್ ಅವರಿಗೆ ಜಯಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು. ನೆರೆದಿದ್ದವರಿಗೆ ಸಿಹಿ‌ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ನರೇಂದ್ರ ಮೋದಿ‌ ಅವರ ಭದ್ರ‌ ಬುನಾದಿ, ಭೂಪೇಂದ್ರ ಪಟೇಲ್ ಅವರ ಜನಪರ ಆಡಳಿತದಿಂದ ಗುಜರಾತ್ ನಲ್ಲಿ‌ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೇಳಹೆಸರಿಲ್ಲದಂತೆ ಮಾಯವಾಗಿದ್ದು‌ ಕರ್ನಾಟಕದಲ್ಲಿ‌ ಕೂಡ ಇದೇ ಮಾದರಿ ಫಲಿತಾಂಶ ಹೊರಬೀಳಲಿದೆ ಎಂದರು.

ಬಿಜೆಪಿ ಜಿಲ್ಲಾ ಮುಖಂಡ ಹಾಗೂ ಪಪಂ ಸದಸ್ಯ ಬಿ.ಅಮೃತ್‌ರಾಜ್ ಮಾತನಾಡಿ, ಸತತ 7ನೇ ಬಾರಿ ಗುಜರಾತ್ ನಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿ‌ ಪಶ್ಚಿಮ ಬಂಗಾಳದ ಇತಿಹಾಸ ಹಿಂದಿಕ್ಕಿದೆ. ಮೋದಿ ನೇತೃತ್ವದ ಭಾರತ ವಿಶ್ವ ಗುರು ಆಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ. ಕರ್ನಾಟಕದಲ್ಲಿ ಕೂಡ ಮಿಷನ್ 150 ಮೂಲಕ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು.

ಜಿಪಂ ಮಾಜಿ‌ ಸದಸ್ಯೆ ಮಂಜುಳಾ ಮಾತನಾಡಿದರು.
ವಿಜಯೋತ್ಸವ ಸಂದರ್ಭ ಬಿಜೆಪಿ ಮುಖಂಡರಾದ ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಕೆ.ಜಿ.ಮನು, ಚರಣ್, ಶಿವಾಜಿ, ಪುಂಡರೀಕಾಕ್ಷ, ಮಧುಸೂದನ್, ಕುಮಾರಪ್ಪ, ವರದ, ರಾಮಚಂದ್ರ, ನಾರಾಯಣ್, ಪ್ರದೀಪ್, ವೈಶಾಖ್, ಪ್ರವೀಣ್, ಇಂದಿರಾ ರಮೇಶ್, ವೇದಾವತಿ, ಅಣ್ಣಯ್ಯ, ಶಿವಶಂಕರ್, ರಜನೀಕಾಂತ್, ನಿಸಾರ್, ಸುಮನ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!