ಕುಶಾಲನಗರ, ಡಿ 09: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದು ಹಸಿರು ನಿಧಿ ಸ್ಥಾಪಿಸಿ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹಿರ್ ತಿಳಿಸಿದರು.
ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 13 ರಂದು ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಯಲ್ಲಿ ಸುವರ್ಣ ಸ್ವಾತಂತ್ರ್ಯೋತ್ಸವ ವನಸಿರಿ ಹೆಸರಿನಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದು.
ಸದಸ್ಯರಿಂದ ಹಸಿರು ನಿಧಿಗೆ ವಂತಿಕೆ ಪಡೆದು ಅದರ ಜೊತೆ ಸಂಘದ ವಾರ್ಷಿಕ ಲಾಭಂಶದಿಂದ ಒಂದು ಮೊತ್ತವನ್ನು ಸೇರಿಸಿ ಹಸಿರು ನಿಧಿ ಸ್ಥಾಪಿಸಲಾಗಿದೆ.
2016ರಿಂದ ಹಸಿರು ನಿಧಿ ವಂತಿಕೆ ಹಣವನ್ನು ಸಂಘದ ಸದಸ್ಯರಿಂದ ಸದ್ರಿ ನಿಧಿಗೆ ಪಡೆಯಲು ಪ್ರಾರಂಭಿಸಿಸಲಾಗಿದೆ.
ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಕೆಲವು ಪ್ರದೇಶದಲ್ಲಿ 350 ರಿಂದ 500 ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಿರ್ವಹಣೆ, ಗೊಬ್ಬರ, ಸುರಕ್ಷತೆ ಇನ್ನಿತರ ವ್ಯವಸ್ಥೆಗಳು ಸೇರಿದಂತೆ 1 ಗಿಡಕ್ಕೆ ರೂ.1500 ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ವಿ.ಸಿ.ಅಮೃತ್ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯನೂ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಯೋಜನೆ ರೂಪಿಸಲಾಗಿದೆ. ಗಿಡ ನೆಟ್ಟ ಪ್ರತಿ ಸದಸ್ಯನ ಹೆಸರು ಗಿಡ ನಾಮಫಲಕದಲ್ಲಿ ಅಳವಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಎಂ.ವಿ.ನಾರಾಯಣ್, ಕವಿತಾ ಮೋಹನ್, ಎನ್.ಇ.ಶಿವ ಪ್ರಸಾದ್, ಸಿಇಒ ಶ್ರೀಜೇಶ್ ಇದ್ದರು.
Back to top button
error: Content is protected !!