ಪ್ರತಿಭೆ

ನೃತ್ಯದಲ್ಲಿ ಗಮನ ಸೆಳೆಯುತ್ತಿರುವ, ಪ್ರತಿಷ್ಠಿತ ಪ್ರಶಸ್ತಿಗಳ ಸಾಧಕಿ ಪಿ.ಎಸ್.ಆರ್ಯ

ಕುಶಾಲನಗರ, ನ 15: ಕಡಿಮೆ ಅವಧಿಯಲ್ಲಿ‌ ನೃತ್ಯ ತರಬೇತಿ ಪಡೆದ ಬಾಲಕಿಯೊಬ್ಬಳು ತನ್ನ ಪ್ರತಿಭೆಯಿಂದ 50 ಕ್ಕೂ ಅಧಿಕ ಪದಕ, ಬಹುಮಾನಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿರುವ ಕುಶಾಲನಗರ ಮಾದಾಪಟ್ಟಣ ಪಿ.ಎಸ್.ಆರ್ಯ ಈ ಸಾಧಕಿ.
12 ವರ್ಷ ಆರ್ಯ ಪ್ರಾಯದ ನೃತ್ಯ ತರಬೇತಿ ಶಾಲೆಗೆ ಸೇರಿದ ಕೇವಲ‌ 4 ವರ್ಷಗಳ ಕಡಿಮೆ‌ ಅವಧಿಯಲ್ಲಿ ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್, ಸ್ಕೇಟಿಂಗ್ ಡ್ಯಾನ್ಸ್, ಸೆಮಿ‌ಕ್ಲಾಸಿಕಲ್ ನೃತ್ಯ ವಿಭಾಗಗಳಲ್ಲಿ ತನ್ನ ಛಾಪು ಮೂಡಿಸಿ
ಬೆಸ್ಟ್ ಫರ್ಫಾಮರ್ ಆಗಿ ಹೊರಹೊಮ್ಮಿದ್ದು ಇವುಗಳ‌ ಜೊತೆಯಲ್ಲಿ‌ ಕರಾಟೆ ಕೂಡ ಅಭ್ಯಸಿಸುತ್ತಿದ್ದಾರೆ.
2018 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಅಖಿಲ‌ ಭಾರತೀಯ ನಾಟ್ಯೋತ್ಸವದಲ್ಲಿ ಭಾಗವಹಿಸಿ ರಾಷ್ಟ್ರೀಯ ನಾಟ್ಯ ಕಲಾನಂದಿ ಗ್ರೂಪ್ ಅವಾರ್ಡ್, 2022 ರಲ್ಲಿ RAABA MEDIA ವತಿಯಿಂದ ನಡೆದ ಇಂಟರ್‌ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಸ್ಟಾರ್ ಫರ್ಫಾಮರ್ ಎಂಬ ಪ್ರಶಸ್ತಿ, ಅದೇ ವರ್ಷ ಚೆನ್ನೈ ನಲ್ಲಿ‌ ನಡೆದ RAABA BOOK OF WORLD RECORDS ವತಿಯಿಂದ ಆಯೋಜಿಸಿದ್ದ WORLD RECORDS FESTIVAL ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಗ ಕಲಾನಿಧಿ ಪ್ರಶಸ್ತಿ, ತಮಿಳುನಾಡಿನ ಮೈಲಾಡುತುರೈ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ JACKHI AWARDS-2022 ಕಾರ್ಯಕ್ರಮದಲ್ಲಿ TALENT ICON ಪ್ರಶಸ್ತಿ, ಇದೇ ನವೆಂಬರ್ ನಲ್ಲಿ RAABA MEDIAS ಸಂಸ್ಥೆ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ನೃತ್ಯ ಸ್ಪರ್ಧೆಯಲ್ಲಿ RISING STAR ಎಂಬ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಕುಶಾಲನಗರದ ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ತರಬೇತಿ ಶಾಲೆಯಲ್ಲಿ ಅನೂಪ್ ಡಿಸೋಜ ಮತ್ತು ಏಂಜಲ್ ರಶ್ಮಿ ಡಿಸೋಜ ಅವರ ಬಳಿ ಕಳೆದ 4 ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಪಿ.ಎಸ್.ಆರ್ಯ ಪೊಲೀಸ್ ಇಲಾಖೆಯ ಪಿ.ಎಂ.ಸುನಿಲ್ ಕುಮಾರ್, ಎಂ.ಪಿ.ಶೃತಿ ದಂಪತಿಗಳ ಪುತ್ರಿ.
ಪ್ರಸಕ್ರ ಆರ್ಯ ಅತ್ತೂರಿನ ಜ್ಞಾನಗಂಗಾ ರೆಸಿಡೆನ್ಷಿಯಲ್ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಆರ್ಯ ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಪೋಷಕರಾದ ಸುನಿಲ್, ಶೃತಿ ಹಾಗೂ ಸಂಬಂಧಿಕರಾದ ಜಿಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಶುಭ ಹಾರೈಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!