ವಿಶೇಷ

ಶ್ವಾನಗಳ ಆರೈಕೆ ಕೇಂದ್ರಕ್ಕೆ ದಾನಿಗಳ ನೆರವು ಬೇಕಿದೆ: ಶ್ವಾನ ಪ್ರಿಯರ ಸಹಕಾರದ ನಿರೀಕ್ಷೆಯಲ್ಲಿ DDRC

ಕುಶಾಲನಗರ, ನ 04: ಆಸರೆಯಿಲ್ಲದ, ರೋಗಪೀಡಿತ ಬೀದಿ ನಾಯಿಗಳು ರಕ್ಷಣೆಗೆಂದೇ ಟಿಬೆಟ್ ಕ್ಯಾಂಪ್ ‌ನಲ್ಲೊಂದು ಕೇಂದ್ರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ.‌ ಅಕ್ಕ ಮತ್ತು ತಮ್ಮ ಸೇರಿ ಸ್ಥಾಪಿಸಿದ ಬೀದಿ ನಾಯಿಗಳ ಆರೈಕೆ ಕೇಂದ್ರಗಳಲ್ಲಿ ಇದೀದ 47 ನಾಯಿಗಳು ಆಶ್ರಯ ಕಂಡುಕೊಂಡಿದೆ. ಬೈಲುಕೊಪ್ಪ ಗ್ರಾಪಂ ವ್ಯಾಪ್ತಿಯ 1ನೇ ಕ್ಯಾಂಪ್ ನಲ್ಲಿರುವ ಡೋಲ್ಮಾ ಡಾಗ್ ರೆಸ್ಕ್ಯೂ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. 2019 ರಲ್ಲಿ ಡೋಲ್ಮಾ ಎಂಬ ಟಿಬೇಟಿಯನ್ ಮಹಿಳೆ ಬೀದಿ ನಾಯಿಗಳ ಆರೈಕೆಗೆಂದು ಕೇಂದ್ರವೊಂದು ಸ್ಥಾಪಿಸಿದ್ದು ಪ್ರಸಕ್ತ ಇಲ್ಲಿ ವಿವಿಧ ರೀತಿಯ ರೋಗಗಳಿಂದ ನರಳುತ್ತಿರುವ ನಾಯಿಗಳ ಆರೈಕೆ ನಡೆಸಲಾಗುತ್ತಿದೆ. ಡೋಲ್ಮಾ ಅವರ ಸಹೋದರ ಕೆಲ್ಸಂಗ್ ಇದೀಗ ಈ ಕೇಂದ್ರದ ಪಾಲಕರಾಗಿದ್ದಾರೆ. ಬಿಕಾಂ ಪದವೀಧರ ಕೆಲ್ಸಂಗ್ ಒಂದೂವರೆ ದಶಕಗಳ ಕಾಲ ಕೇರಳ, ಹಾಸನ ಸೇರಿದಂತೆ ವಿವಿಧೆಡೆ ಇಂಗ್ಲೀಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿ 2018. ರಲ್ಲಿ ನಿವೃತ್ತಿ ಪಡೆದು ಅಕ್ಕನ ಆರೈಕೆ ಕೇಂದ್ರದ ನಿರ್ವಹಣೆ ಬವಾಬ್ದಾರಿ ಹೊತ್ತುಕೊಂಡರು. ಬಾಲ್ಯದಿಂದಲೇ ಇಬ್ವರಿಗೂ ನಾಯಿ ಮೇಲಿನ ಪ್ರೀತಿ ಈ ಕೇಂದ್ರ ಸ್ಥಾಪನೆಗೆ ಕಾರಣ. ಪ್ರತಿ ತಿಂಗಳು ಈ ಕೇಂದ್ರ ನಡೆಸಲು 60 ರಿಂದ 70 ಸಾವಿರ ವೆಚ್ಚವಾಗುತ್ತಿದೆ. ನಾಯಿಗಳಿಗೆ ಆಹಾರ, ಔಷಧಿ, ನೆಲಬಾಡಿಗೆ, ಮೂವರು ಸಹಾಯಕರ ಸಂಬಳ ಮತ್ತಿತರ ಖರ್ಚುನ್ನು ಇಬ್ಬರೇ ಭರಿಸುತ್ತಿದ್ದಾರೆ. ಡೋಲ್ಮಾ ಅವರು ನ್ಯೂಯಾರ್ಕ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು ಅಲ್ಲಿಂದ ಇಲ್ಲಿಗೆ ಅಗತ್ಯ ಹಣಕಾಸು ನೆರವು ನೀಡುತ್ತಿದ್ದಾರೆ. ಆರೈಕೆ ಕೇಂದ್ರದ ಪಾಲಕ ಕೆಲ್ಸಂಗ್ ಸ್ವತಃ ನಾಯಿಗಳನ್ನು ಶುಶ್ರೂಷೆ ಮಾಡುತ್ತಾರೆ. ಮಾತ್ರವಲ್ಲದೆ ಇತರರು ಕೂಡ ಇಲ್ಲಿಗೆ ಚಿಕಿತ್ಸೆಗೆಂದು ನಾಯಿಗಳನ್ನು ತರುತ್ತಾರೆ. ಅಂತಹವರಿಂದ ಮಾತ್ರ ಚಿಕಿತ್ಸೆಗೆ ಹಣ‌ ಪಡೆದುಕೊಳ್ಳಲಾಗುತ್ತಿದೆ.

ದಿನ ಕಳೆದಂತೆ ಕೇಂದ್ರದ ನಿರ್ವಹಣೆ ವೆಚ್ಚ ಏರಿಕೆಯಾಗುತ್ತಿದ್ದು ದಾನಿಗಳು ಅಗತ್ಯ ನೆರವು ನೀಡಲು ಕೋರಲಾಗಿದೆ. ನಾಯಿಗಳಿಗೆ ‌ಬೇಕಾದ ಆಹಾರ, ಔಷಧಗಳನ್ನು ಕೊಡುಗೆ‌ ನೀಡಿದಲ್ಲಿ ಅನುಕೂಲವಾಗಲಿದೆ. ಸಂಘ ಸಂಸ್ಥೆಗಳು, ಶ್ವಾನ ಪ್ರಿಯರು ನಾಯಿಗಳ ದತ್ತು ಪಡೆದುಕೊಂಡಲ್ಲಿ‌ ಕೂಡ‌ ಅನುಕೂಲವಾಗಲಿದೆ ಎಂದು ಕೆಲ್ಸಂಗ್ ಈ ಮೂಲಕ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!