ಕಾರ್ಯಕ್ರಮ
ಮುಳ್ಳುಸೋಗೆ ಗ್ರಾಪಂ ನಲ್ಲಿ ಅರಿವು ಮತ್ತು ನೆರವು ಕಾರ್ಯಗಾರ
ಕುಶಾಲನಗರ, ನ 03: ತಾಲೂಕು ಕಾನೂನು ಸೇವಾ ಸಮಿತಿ ಗ್ರಾಮ ಪಂಚಾಯತ್ ಮುಳ್ಳುಸೋಗೆ ಹಾಗೂ ನ್ಯಾಯಾಂಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನದ ಅಂಗವಾಗಿ *ಅರಿವು ಮತ್ತು ನೆರವು* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸದರಿ ಕಾರ್ಯಕ್ರಮದಲ್ಲಿ ವಕೀಲರಾದ ಚಂದ್ರಿಕಾ ಹಾಗೂ ವಕೀಲರಾದ ಸಂತೋಷ್ ಕುಮಾರ್ ಜನತಾ ಕಾನೂನು ಉಚಿತ ಕಾನೂನು ಸೇವೆ ಜನನ ಮರಣ ನೋಂದಣಿ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು.ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಜೊತೆಗೆ ಪಂಚಾಯತ್ ವ್ಯಾಪ್ತಿಯ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸ್ವಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಕುಮಾರಿಯವರು ಮಾತನಾಡಿ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದರಲ್ಲದೆ ಕಾನೂನು ಅರಿವಿನ ಅಗತ್ಯತೆ ಮನದಟ್ಟು ಮಾಡಿಕೊಟ್ಟರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಳ್ಳುಸೋಗೆಯ ಸಹ ಶಿಕ್ಷಕರಾದ ವಾಣಿಯವರು ಪ್ರಾರ್ಥಿಸಿದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ರವರು ಸ್ವಾಗತಿಸಿ ವಂದಿಸಿದರು