ಕುಶಾಲನಗರ, ನ 01: 67 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೂಡಿಗೆ ಡೈರಿಯ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಅಂಗವಾಗಿ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಕೂಡಿಗೆ ಡೈರಿ ವ್ಯವಸ್ಧಾಪಕ ನಂದೀಶ್, ಸಹ ವ್ಯವಸ್ಥಾಪಕ ಸೇರಿದಂತೆ ವಿಸ್ತಾರಣಾಧಿಕಾರಿ ಮತ್ತು ಅಡಳಿತ ವರ್ಗದವರು ಮತ್ತು ನೂರಾರು ಕಾರ್ಮಿಕ ವೃಂದದರು ಹಾಜರಿದ್ದರು. ಇದೆ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅಗಮಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಾಲನ್ನು ವಿತರಣೆ ಮಾಡಲಾಯಿತು.
Back to top button
error: Content is protected !!