ಕುಶಾಲನಗರ, ಅ 29: ಕುಶಾಲನಗರ ಸಮೀಪದ ಅತ್ತೂರಿನ
ಜ್ಞಾನ ಗಂಗಾ ವಸತಿ ಶಾಲೆಯಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಮತ್ತು ಕರ್ನಾಟಕ ಸರಕಾರದ ಆದೇಶದ ಮೇರೆಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ನಾಡು – ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಮತ್ತು ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುವ ಗೀತೆ ಮತ್ತು ಕವನಗಳನ್ನು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಮೂಹಿಕವಾಗಿ ಹಾಡಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಮೂಲಕ ‘ ನನ್ನ ನಾಡು ನನ್ನ ಹಾಡು’ ಎಂಬ ನುಡಿಯ ಶ್ರೇಷ್ಠತೆಯನ್ನು ಸಾರಲಾಯಿತು.
Back to top button
error: Content is protected !!