ಕುಶಾಲನಗರ, ಅ 28: ಕುಶಾಲನಗರದ ಕೋಣಮಾರಿಯಮ್ಮ ದೇವಾಲಯದ 20ನೇ ವಾರ್ಷಿಕ ಪೂಜೋತ್ಸವ ಸಮಾರಂಭ ಶುಕ್ರವಾರ ಸಮಾಪ್ತಿಗೊಂಡಿತು.
ದೇವತಾ ಸೇವಾ ಟ್ರಸ್ಟ್ ಆಶ್ರಯದಲ್ಲಿ
ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಶುಕ್ರವಾರ ನಡೆದ ಪೂಜೋತ್ಸವದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ದೇವರ ಆಶೀರ್ವಾದ ಪಡೆದರು.
ಟ್ರಸ್ಟ್ ವತಿಯಿಂದ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ಕುಮಾರ್, ಖಜಾಂಚಿ ಲೋಕೇಶ್, ಮಾಜಿ ಅಧ್ಯಕ್ಷರುಗಳಾದ. ಬಿ.ಜೈವರ್ಧನ್, ಚೆಲುವರಾಜು, ಶಿವಾನಂದ, ನಿರ್ದೇಶಕ ಎಂ.ಬಿ.ಸುರೇಶ್ ಮತ್ತಿತರ ಪದಾಧಿಕಾರಿಗಳು ಇದ್ದರು.
Back to top button
error: Content is protected !!