ಕಾರ್ಯಕ್ರಮ

ಡಿಸೆಂಬರ್‌ಗೆ ದೇವರಾಜ ಅರಸ್ ಹೈಟೆಕ್ ಆಸ್ಪತ್ರೆ‌ ಲೋಕಾರ್ಪಣೆ: ಡಾ.ಸುಧಾಕರ್ ಭರವಸೆ

ಕುಶಾಲನಗರ, ಅ 28: ಡಿಸೆಂಬರ್-೨೦೨೨ರೊಳಗೆ ಹುಣಸೂರಿನಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಹೈಟೆಕ್ ಆಸ್ಪತ್ರೆಯನ್ನು ಪೂರ್ಣಗೊಳಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಆರ್.ಸುಧಾಕರ್ ಭರವಸೆ ಇತ್ತರು. ಶಾಸಕ ಎಚ್.ಪಿ.ಮಂಜುನಾಥರ ಮನವಿ ಮೇರೆಗೆ ನಿರ್ಮಾಣ ಹಂತದ ಆಸ್ಪತ್ರೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಆರಂಭದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯನ್ನು ೧೩೫ಹಾಸಿಗೆಗಳಿಗೆ ಏರಿಕೆ ಮಾಡಲಾಗಿದ್ದ ಪರಿಣಾಮ ಅಂದಾಜು ವೆಚ್ಚವೂ ಹೆಚ್ಚಿದೆ. ಕೆಲ ತಾಂತ್ರಿಕ ಸಮಸ್ಯೆ, ಸ್ಥಳ ಬದಲಾವಣೆಯಿಂದಾಗಿ ೨೫ರಿಂದ ೩೨ಕೋಟಿಗೆ ಏರಿಕೆಯಾಗಿದೆ. ಈ ವೇಳೆ ೨೫ಕೋಟಿಗೆ ನಿಗದಿಗೊಳಿಸುವ ಸಲುವಾಗಿ ಕಾಂಪೌAಡ್, ನೀರಿನ ಟ್ಯಾಂಕ್, ಲಿಪ್ಟ್, ಒಳಾಂಗಣ ರಸ್ತೆ ಸೇರಿದಂತೆ ಕೆಲ ಪ್ರಮುಖ ಕಾಮಗಾರಿಗಳೇ ಕೈಬಿಟ್ಟು ಹೋಗಿದೆ. ಇದಕ್ಕೆ ಅಂದಾಜು ೭-೮ ಕೋಟಿರೂ ಅವಶ್ಯವಿದ್ದು, ತಕ್ಷಣವೇ ಆಡಳಿತಾತ್ಮಕ ಮಂಜೂರಾತಿ ಕೊಡಿಸುವೆ. ಅಲ್ಲದೆ ಅಗತ್ಯ ಉಪಕರಣಗಳ ಖರೀದಿಗೂ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಗುವುದೆಂದ ಸಚಿವರು ಸ್ಥಳದಿಂದಲೇ ಆರೋಗ್ಯ ಇಲಾಖೆ ಕಾರ್ಯದರ್ಶಿ ರಂದೀಪ್‌ರನ್ನು ಸಂಪರ್ಕಿಸಿ ಮಂಜೂರಾತಿಗೆ ತಕ್ಷಣವೇ ಅಗತ್ಯಕ್ರಮವಹಿಸುವಂತೆ ಹಾಗೂ ಹೆಚ್ಚುವರಿ ಕಾಮಗಾರಿಗಳಿಗೆ ಸಂಬAಧಿಸಿದAತೆ ತಕ್ಷಣವೇ ಕ್ರಿಯಾ ಯೋಜನೆ ಸಲ್ಲಿಸುವಂತೆ ಚೀಫ್‌ಇಂಜಿನಿಯರ್ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಶ್ರೀನಾಥ್‌ರಿಗೆ ಸಚಿವರು ಸೂಚಿಸಿದರು.ಇದೇ ವೇಳೆ ಶಾಸಕ ಮಂಜುನಾಥ್‌ರು ೨೦೧೮ರ ಸಿದ್ದರಾಮಯ್ಯರ ಅವಧಿಯಲ್ಲಿ ಮಂಜೂರಾದ ಈಆಸ್ಪತ್ರೆ ನಿರ್ಮಾಣ ಪೂರ್ಣಗೊಳ್ಳಲು ಹಾಗೂ ಅಗತ್ಯವಿರುವ ಬಾಕಿ ಅನುದಾನ ಬಿಡುಗಡೆಗೆ ಸದನದಲ್ಲಿ ಪ್ರಶ್ನಿಸಿದ್ದೆ, ಕೊಟ್ಟ ಭರವಸೆಯಂತೆ ಪೂರ್ಣಗೊಳ್ಳಲು ಅನುದಾನ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಈ ಡಿಸಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಉಳಿದ ಕಾಮಗಾರಿಗಳಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡುವುದಾಗಿ ಸಚಿವರು ವಾಗ್ದಾನ ಮಾಡಿದರು. ಹನಗೋಡು-ಬಿಳಿಕೆರೆ ಆಸ್ಪತ್ರೆ ಮೇಲ್ದರ್ಜೆಗೇರಿಸಿ:ರಾಜ್ಯದಲ್ಲೇ ಅತೀ ಹೆಚ್ಚು ಹೆರಿಗೆಯಾಗುವ ಆಸ್ಪತ್ರೆಗಳಲ್ಲಿ ಒಂದಾದ ಕಾಡಂಚಿನ ಹನಗೋಡು ಪಿಎಚ್‌ಸಿಯನ್ನು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಶಾಸಕರ ಮನವಿಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವ ಭರವಸೆ ಇತ್ತರು. ಇದೇ ವೇಳೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ರಾತ್ರಿ ಪಾಳಿಯಲ್ಲಿ ಒಬ್ಬರೇ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ವೈದ್ಯರ ನೇಮಕಕ್ಕೆ ಕ್ರಮವಹಿಸಬೇಕೆಂಬ ಬೇಡಿಕೆಗೆ ಪಿ.ಜಿ.ವೈದ್ಯರ ನೇಮಕಕ್ಕೆ ಕ್ರಮವಹಿಸಲು ಡಾ.ಸರ್ವೇಶ್‌ರಾಜ್‌ಅರಸ್‌ರಿಗೆ ಸೂಚಿಸಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಂಸದ ಮನವಿ:ಹಾಲಿ ಸಾರ್ವಜನಿಕ ಆಸ್ಪತ್ರೆಯನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಸಂಸದ ಪ್ರತಾಪಸಿಂಹ ಮಾಡಿದ ಮನವಿಗೆ ಸ್ಥಳದಲ್ಲಿದ್ದ ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಇಂದುಮತಿಗೆ ಅಗತ್ಯ ಕ್ರಮವಹಿಸಲು ಸೂಚಿಸಿ, ಹನಗೋಡು ಹಾಗೂ ಬಿಳಿಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪರಿಶೀಲಿಸಲಾಗುವುದೆಂದರು. ತಹಸೀಲ್ದಾರ್ ಡಾ.ಅಶೋಕ್, ಡಿಎಚ್‌ಓ ಡಾ.ಪ್ರಸಾದ್, ಟಿಎಚ್‌ಓ ಡಾ.ಕೀರ್ತಿಕುಮಾರ್, ಡಾ.ಸವೇಶ್‌ರಾಜೇಅರಸ್ ಜೊತೆಗಿದ್ದರು.ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭೆ ಸದಸ್ಯರಾದ ಸೈಯದ್‌ಯೂನಸ್, ಸಮೀನಾಬಾನು, ರಮೇಶ್, ಮನು, ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಕಲ್ಕುಣಿಕೆರಮೇಶ್, ದೇವರಾಜ್, ಮಾಜಿ ಉಪಾಧ್ಯಕ್ಷ ದೇವನಾಯಕ, ರಾಘು, ವೆನ್ನಿ, ಕುಮಾರ್, ಪ್ರಭಾಕರ್, ನಾಗರಾಜ್, ಮಂಜು, ಆಸ್ಪತ್ರೆಜಯರಾಂ, ಬಿಜೆಪಿ ಮುಖಂಡರಾದ ಯೋಗಾನಂದಕುಮಾರ್, ವೀರೇಶ್‌ರಾವ್‌ಬೋಬಡೆ, ವಿ.ಎನ್.ದಾಸ್ ಸೇರಿದಂತೆ ಅನೇಕರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!