ಕುಶಾಲನಗರ, ಅ 26: ನಂಜರಾಯಪಟ್ಟಣ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ 16ನೇ ವರ್ಷದ ವಾರ್ಷಿಕ ಪೂಜೋತ್ಸವ ಅ.31, ನ.1 ರಂದು ಎರಡು ದಿನಗಳ ಕಾಲ ನಡೆಯಲಿದೆ.
31 ರಂದು ಸೋಮವಾರ ಸಂಜೆ 5 ರಿಂದ 9 ರವರೆಗೆ ದುರ್ಗಪೂಜೆ, ಪುಣ್ಯಹಶುದ್ದಿ, 1 ರಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ನವಕ, ಕಲಸಪೂಜೆ, 10 ಗಂಟೆಗೆ ಕಲಸಾಭಿಷೇಕ ನಂತರ ಮಹಾಪೂಜೆ ಬಳಿಕ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9481868738, 9480768909 ಸಂಪರ್ಕಿಸಲು ಕೋರಿದೆ.
Back to top button
error: Content is protected !!