ಕುಶಾಲನಗರ, ಅ 26: ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ಬಾನುವಾರ ವಿದ್ಯುತ್ ಹೊಲ್ಟೇಜ್ ವ್ಯತ್ಯಾಸದಿಂದ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಿ ಹಲವು ಮನೆಗಳಲ್ಲಿ ಹಲವು ಉಪಕರಣಗಳು ಹಾಳಾಗಿವೆ. ದಿನಸಿ ಅಂಗಡಿ ನಡೆಸಿಕೊಂಡು ಜೆರಾಕ್ಸ್ ಮಿಷನ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ರಾಮಣ್ಣ ಅವರ ಮನೆಯಲ್ಲಿ ವಾಟರ್ ಫಿಲ್ಟರ್, ಜೆರಾಕ್ಸ್ ಮಿಷನ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿದೆ. ವಿಜಯವಾಣಿ ವರದಿಗಾರ ಸೋಮೇಶ್ವರ ಬಡಾವಣೆ ನಿವಾಸಿ ನಾಗೇಶ್.ಕೆ.ಎಸ್ ಅವರ ಮನೆಯಲ್ಲಿ ಟಿವಿ, ಯುಪಿಎಸ್, ಸರೌಂಡ್ ಸಿಸ್ಟಮ್ ಮತ್ತು ಲೈಟುಗಳು ಸೇರಿದಂತೆ ಹಲವು ಗೃಹಪಯೋಗಿ ಉಪಕರಣಗಳು ದುರಸ್ಥಿ ಮಾಡಲಾಗದಷ್ಟು ಹಾಳಾಗಿದೆ. ಮಾಧ್ಯಮದೊಂದಿಗೆ ರಾಮಣ್ಣ ಮಾತನಾಡಿ, ಕರೊನ ಸಂಕಷ್ಟದಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಈಗ ಆರ್ಥಿಕವಾಗಿ ಚೇತರಿಕೆ ಕಾಣಬೇಕಾದರೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತಕ್ಷಣವೇ ವಿದ್ಯುತ್ ಇಲಾಖೆಯಿಂದ ನಮ್ಮ ನಷ್ಟ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
Back to top button
error: Content is protected !!