ಕಾರ್ಯಕ್ರಮ
ಹಾಸನ ಜಿಲ್ಲೆಯ ರಾಮನಾಥಪುರದತ್ತ ಕಾವೇರಿ ತೀರ್ಥ ಯಾತ್ರೆ ತಂಡ
ಕುಶಾಲನಗರ, ಅ.23: ಕಾವೇರಿ ತೀರ್ಥ ಯಾತ್ರೆ ತಂಡ ಜಿಲ್ಲೆಯ ಗಡಿ ದಾಟಿ ಹಾಸನ ಜಿಲ್ಲೆಯ ರಾಮನಾಥಪುರದತ್ತ ತೆರಳಿತು.
ಅಕ್ಟೋಬರ್ 21 ರಂದು ತಲಕಾವೇರಿಯಿಂದ ಚಾಲನೆಗೊಂಡ ಕಾವೇರಿ ಸ್ವಚ್ಛತಾ ಅಭಿಯಾನ ತಂಡ ಕುಶಾಲನಗರ, ಕಣಿವೆ ನದಿ ತಟಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ ಕೊಣನೂರು ಮೂಲಕ ರಾಮನಾಥಪುರ ಸಾಗಿತು.
ಅಖಿಲ ಭಾರತ ಸನ್ಯಾಸಿಗಳ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ತಂಡ ಕರ್ನಾಟಕ, ತಮಿಳುನಾಡು ವ್ಯಾಪ್ತಿಯಲ್ಲಿ ಕಾವೇರಿ ನದಿ ತಟದಲ್ಲಿ ತೆರಳಿ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ತಲಕಾವೇರಿ ಕ್ಷೇತ್ರದಿಂದ ಪವಿತ್ರ ತೀರ್ಥವನ್ನು ಯಾತ್ರೆಯಲ್ಲಿ ಒಯ್ಯಲಾಗುತ್ತಿದ್ದು, ನವೆಂಬರ್ 13ರಂದು ತಮಿಳುನಾಡಿನ ಪೂಂಪ್ ಹಾರ್ ಕ್ಷೇತ್ರದಲ್ಲಿ ಪವಿತ್ರ ತೀರ್ಥ ವಿಸರ್ಜಿಸುವ ಮೂಲಕ ಯಾತ್ರೆ ಸಮಾರೋಪಗೊಳ್ಳಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್ ತಿಳಿಸಿದ್ದಾರೆ.